ಸುಳ್ಳು ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಂಬಳದ ಶ್ರೀನಿವಾಸ ಗೌಡ ನಿರ್ಧಾರ

IMG_20220723_112235
Published on

ಮಂಗಳೂರು: ತನ್ನ ವಿರುದ್ಧ ವ್ಯಕ್ತವಾದ ಸುಳ್ಳು ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಲೋಕೇಶ್ ಮುಚ್ಚೂರು ನನ್ನ ಒಪ್ಪಿಗೆ ಪಡೆಯದೆ ತನ್ನ ಭಾವಚಿತ್ರ ಬಳಸಿಕೊಂಡಿದ್ದಾರೆ. ಕಂಬಳ ಕ್ರೀಡಾಕೂಟದಲ್ಲಿ ನಿರಂತರ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿರುವುದರಿಂದ ಅವರಿಗೆ ಅದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಈ ರೀತಿಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿಗೆ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ ಎಂದವರು ಹೇಳಿದರು.
ಕಂಬಳದ ಯಜಮಾನರಾದ ರಶ್ಮಿತ್ ಶೆಟ್ಟಿ, ಹರ್ಷವರ್ಧನ, ಮಿಜಾರ್ ಶಕ್ತಿ ಪ್ರಸಾದ್ ಶೆಟ್ಟಿ, ಸಚಿನ್ ಅಡಪ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net