ಕೋಳೂರುಗೆ ಬಸ್ ಸೌಲಭ್ಯ ಒದಗಿಸಿ

08-DVD-2
ಕೋಳೂರು ಗ್ರಾಮಕ್ಕೆ ಬಸ್‌ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ಡಿಪೋ ಮ್ಯಾನೇಜರ್ ರಾಮನಗೌಡಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಕೆಆರ್‌ಎಸ್ ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರ್ಗಣ್ಣ ಇರಬಗೆರಾ ಪ್ರಮುಖರಾದ ಯಂಕಪ್ಪ ವೆಂಗಳಾಪುರ, ರೇಣುಕಮ್ಮ ಕೋಳೂರು, ಚನ್ನಮ್ಮ ಕೋಳೂರು, ಕಾವೇರಿ ಕೋಳೂರು, ರಾಘವೇಂದ್ರ ಕೋಳೂರು ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಕೋಳೂರು ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದ ಬಸ್ ಡಿಪೋ ಮ್ಯಾನೇಜರ್ ರಾಮನಗೌಡಗೆ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಮನವಿ ಸಲ್ಲಿಸಿದರು.

ಕೋಳೂರು ತಾಲೂಕಿನ ಕೊನೇ ಗ್ರಾಮವಾಗಿದೆ. ಸ್ವಾತಂತ್ರ್ಯ ಬಂದು 75ವರ್ಷ ಕಳೆದರೂ ಗ್ರಾಮ ಬಸ್ ಕಂಡೇ ಇಲ್ಲ. ಗ್ರಾಮಸ್ಥರು, ವಿದ್ಯಾರ್ಥಿಗಳು ಪರಸ್ಥಳಕ್ಕೆ ಹೋಗಲು ಖಾಸಗಿ ವಾಹನ ಅವಲಂಬಿಸಬೇಕಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಎರಡ್ಮೂರು ಕಿ.ಮೀ. ಹೇಮನಾಳಗೆ ನಡೆದುಕೊಂಡು ಬರಬೇಕಿದೆ.

ಇದರಿಂದ ಮಹಿಳೆಯರು, ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಗಬ್ಬೂರಿನಿಂದ ಮದರಕಲ್ ಮಾರ್ಗವಾಗಿ ಗೂಗಲ್‌ಗೆ ಸಂಚಾರ ಮಾಡುವ ಬಸ್‌ಗಳು ಕೋಳೂರು ಗ್ರಾಮಕ್ಕೆ ಬಂದು ಹೋಗುವ ವ್ಯವಸ್ಥೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net