

ಹಾವೇರಿ: ವರದಾ ನದಿಯ ಬ್ಯಾರೇಜ್ಗೆ ಅಳವಡಿಸಲು ಇಟ್ಟಿದ್ದ 1.45 ಲಕ್ಷ ರೂ. ಮೌಲ್ಯದ 98 ಗೇಟ್ಗಳನ್ನು ಯಾರೋ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕೋಳೂರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
2010-11ನೇ ಸಾಲಿನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ವತಿಯಿಂದ ಕೋಳೂರ ಗ್ರಾಮದ ವರದಾ ನದಿಗೆ ಬ್ಯಾರೇಜ್ ನಿಮಿರ್ಸಿ ಅದಕ್ಕೆ 132 ಗೇಟ್ಗಳನ್ನು ಅಳವಡಿಸಲಾಗಿತ್ತು.
ಕಳೆದ ಎಪ್ರೀಲ್-ಮೇ ತಿಂಗಳಲ್ಲಿ ಅವುಗಳನ್ನು ಹೊರಗೆ ತೆಗೆದು ಪಕ್ಕದ ಗೋದಾಮಿನಲ್ಲಿ ಇಡಲಾಗಿತ್ತು. ಆದರೆ, ಯಾರೋ ಖದೀಮರು ಅದರಲ್ಲಿದ್ದ 98 ಗೇಟ್ಗಳನ್ನು ದೋಚಿದ್ದಾರೆ ಎಂದು ಇಲಾಖೆಯ ಶಾಖಾಧಿಕಾರಿ ಮಂಜುನಾಥ ಬಡಿಗೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.