

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ೭ನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾಟದಲ್ಲಿ ಕೊಳಂಬೆ ತಂಡ ಫ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ದಿನದ ಮೊದಲ ಪಂದ್ಯದಲ್ಲಿ ಚೆರಿಯಮನೆ ಮತ್ತು ಎಡಿಕೇರಿ ಸೆಣಸಾಟ ನಡೆಸಿ ಎಡಿಕೇರಿ ತಂಡ ೬-೧ ಗೋಲುಗಳಿಂದ ಗೆಲುವು ಸಾಧಿಸಿತು. ಚೆರಿಯಮನೆ ತಂಡದ ಪರ ಚೇತನ್ ೧ ಗೋಲು ದಾಖಲಿಸಿದರೆ, ಎಡಿಕೇರಿ ತಂಡದ ಪರ ಗಗನ್ ೩, ರೋಷನ್, ಪ್ರಶಾಂತ್ ಹಾಗೂ ವೇದಾಂತ್ ತಲ ೧ ಗೋಲು ದಾಖಳಿಸಿದರು.
ಪರಿಚನ ಮತ್ತು ಕೊಳಂಬೆ ತಂಡಗಳ ನಡುವಿನ ಪಂದ್ಯಾಟಲ್ಲಿ ಕೊಳಂಬೆ ತಂಡ ೩-೨ ಗೋಲುಗಳಿಂದ ಗೆಲುವು ಸಾಧಿಸಿತು. ಪರಿಚನ ತಂಡದ ಪರ ದೀಕ್ಷಿತ್ ಹಾಗೂ ಲೋಕೇಶ್ ತಲ ೧ ಗೋಲು ದಾಖಲಿಸಿದರೆ, ಕೊಳಂಬೆ ತಂಡದ ಪರ ಜಗನ್, ಕವನ್ ಹಾಗೂ ಗಿರೀಶ್ ೧ ಗೋಲು ದಾಖಲಿಸಿದರು. ಬಿದ್ರುಪಣೆ ಮತ್ತು ಪಾರೇರ ತಂಡಗಳು ಯಾವುದೇ ಗೋಳು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಟ್ರೈ ಬ್ರೆಕರ್‌ನಲ್ಲಿ ಬಿದ್ರುಪಣೆ ತಂಡ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಬಡುವಂಡ್ರ ಮತ್ತು ಕೋಟೆರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಂಡ್ರ ತಂಡ ೫-೦ ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಬಡುವಂಡ್ರ ತಂಡದ ಪರ ದುಷ್ಯಂತ್, ಭರತ್ ತಲಾ ೨, ಸುಜಯ್ ೧ ಗೋಲು ಬಾರಿಸಿದರು. ನಂಗಾರು ಮತ್ತು ಚೆಟ್ಟಿಮಾಡ ಎ ತಂಡಗಳ ನಡುವಿನ ಪಂದ್ಯಾಟದಲ್ಲಿ ನಂಗಾರು ೩-೧ ಗೋಲುಗಳಿಂದ ಜಯ ಸಾಧಿಸಿತು. ನಂಗಾರು ತಂಡದ ಪರ ಅಭಿಷೇಕ್, ಚೇತು, ಮೋಹಿತ್ ತಲಾ ೧ ಗೋಲು ದಾಖಲಿಸಿದರೆ, ಚೆಟ್ಟಿಮಾಡ ತಂಡದ ಪರ ಹರ್ಷ ೧ ಗೋಲು ದಾಖಲಿಸಿದರು.
ಕಾಂಗೀರ ಮತ್ತು ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯಾಟದಲ್ಲಿ ಕಾಂಗೀರ ತಂಡ ೩-೦ ಗೋಲುಗಳಿಂದ ಗೆಲುವು ಸಾಧಿಸಿತು. ಕಾಂಗೀರ ತಂಡದ ಪರ ಯತಿನ್, ನಕುಲ್ ಹಾಗೂ ಚೇತನ್ ತಲಾ ೧ ಗೋಲು ದಾಖಲಿಸಿದರು. ಹುದೇರಿ ತಂಡವನ್ನು ಬೋಳ್ತಾಜಿರ ತಂಡ ೬-೦ ಗೋಲುಗಳಿಂದ ಮಣಿಸಿತು. ಬೋಳ್ತಾಜಿರ ತಂಡದ ಪರ ಪೃಥ್ವಿ ೩, ಗಗನ್ ೨, ಸಚಿನ್ ೧ ಗೋಲು ದಾಖಲಿಸಿದರು.
ಎಡಿಕೇರಿ ಮತ್ತು ಕೊಳಂಬೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಇತ್ತಂಡಗಳು ೧-೧ ಗೋಲುಗಳ ಸಮಬಲ ಪ್ರದರ್ಶನ ನೀಡಿತು. ನಂತರ ನಡೆದ ಟ್ರೈ ಬ್ರೆಕರ್‌ನಲ್ಲಿ ಕೊಳಂಬೆ ಗೆದ್ದು ಫ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು. ಕಾನಡ್ಕ ಮತ್ತು ಕಡ್ಯದ ತಂಡಗಳ ನಡುವಿನ ಪಂದ್ಯದಲ್ಲಿ ಕಡ್ಯದ ತಂಡ ೫- ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ಕಡ್ಯದ ತಂಡದ ಪರ ವೈಶಾಕ್ ೩ ಹಾಗೂ ಕಾರ್ತಿಕ್ ೨ ಗೋಲು ದಾಖಲಿಸಿದರು.
ಮಗೇರನ ಮತ್ತು ಬೈಲೇರ ತಂಡಗಳ ನಡುವಿನ ಪಂದ್ಯಾಟದಲ್ಲಿ ಬೈಲೇರ ತಂಡ ೩-೧ ಗೋಲುಗಳಿಂದ ಗೆಲುವು ಸಾಧಿಸಿತು. ಮಗೇರನ ತಂಡದ ಪರ ಅಜಿತ್ ೧ ಗೋಲು ದಾಖಲಿಸಿದರೆ, ಬೈಲೇರ ತಂಡದ ಪರ ಹರ್ಷಿತ್ ೨, ರೋಹಿತ್ ೧ ಗೋಲು ದಾಖಲಿಸಿದರು.