ಕೊಲ್ಲೂರು ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

kollur new
Published on

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕೆ ಸಾನ್ನಿಧ್ಯದಲ್ಲಿ ವೈಭವದ ಶರನ್ನವರಾತ್ರಿ ಉತ್ಸವಕ್ಕೆ ಶನಿವಾರ ದೇವಳದ ತಂತ್ರಿ ಹಾಗೂ ಪ್ರಧಾನ ಅರ್ಚಕ ಕೆ. ರಾಮಚಂದ್ರ ಅಡಿಗ ಗಣಪತಿ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.

ದೇವಳದ ಆಡಳಿತಾಧಿಕಾರಿ ಕೆ. ರಾಜು, ಮುಖ್ಯಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕ್ಷೇತ್ರ ಪುರೋಹಿತರು, ಉಪಾದಿವಂತರು ಉಪಸ್ಥಿತರಿದ್ದರು. ವಿಜಯದಶಮಿ ತನಕ ಜರುಗಲಿರುವ ಶರನ್ನವರಾತ್ರಿ ಪ್ರಯುಕ್ತ ದೇವರ ದರ್ಶನಕ್ಕಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲತೆಗೆ ಕರೊನಾ ಮಾರ್ಗಸೂಚಿಯೊಂದಿಗೆ ಸಕಲ ಸೌಕರ್ಯ ಒದಗಿಸುವ ವ್ಯವಸ್ಥೆ ದೇವಾಲಯದ ವತಿಯಿಂದ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net