30 ಕೋಟಿ ವೆಚ್ಚದ ಸೇತುವೆ ನಿರ್ಮಾಣ : ಶಿಲಾನ್ಯಾಸ ನೆರವೇರಿಸಿ ಶಾಸಕ ಉಮಾನಾಥ ಕೋಟ್ಯಾನ್ ಭರವಸೆ

43
Published on

ಕಿನ್ನಿಗೋಳಿ: ದ.ಕ. ಜಿಲ್ಲೆ, ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಪ್ರಧಾನ ಬಳ್ಕುಂಜೆ ಸೇತುವೆ ಅಪಾಯದಲ್ಲಿದ್ದು, ದೊಡ್ಡ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿಯಲ್ಲಿ ಸಂಪೂರ್ಣ ಸಹಕಾರದ ಜತೆಗೆ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸಂಪೂರ್ಣ ಆದ್ಯತೆ ನೀಡುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಕಾಂತಾಬಾರೆ ಬೂದಬಾರೆ ಬಸ್ ಸ್ಟಾೃಂಡ್ ಬಳಿಯಿಂದ ಮುಖ್ಯ ರಸ್ತೆ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದ್ದು, ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನೂತನ ಸೇತುವೆ ನಿರ್ಮಾಣಕ್ಕೆ 30 ಕೋಟಿ ವೆಚ್ಚ ಬೇಕಿದ್ದು, ಈ ಬಗ್ಗೆ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನೋತ್ತರ ಚರ್ಚೆಯಲ್ಲಿ ಭಾಗವಹಿಸಿದ್ದು, ರಾಜ್ಯ ಸರ್ಕಾರ 1,000 ಕೋಟಿ ನೂತನ ಸೇತುವೆಗಳಿಗೆ ಇರಿಸಿದೆ. ಅದರಲ್ಲಿ ಬಳ್ಕುಂಜೆ, ಮರವೂರು ಸೇತುವೆ ನಿರ್ಮಾಣದ ಯೋಜನೆ ಇದೆ ಎಂದರು.

ಮೂಲ್ಕಿ ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜಾ, ಉಪಾಧ್ಯಕ್ಷ ನವೀನ್ ಶೆಟ್ಟಿ, ಸದಸ್ಯರಾದ ರಾಜೆೇಶ್ ಶೆಟ್ಟಿ, ಆನಂದ ಕೊಲ್ಲೂರು, ವನಿತಾ ಪೂಜಾರಿ, ಶಾಂತಾ, ಮಾಜಿ ತಾಪಂ ಸದಸ್ಯೆ ರಶ್ಮಿ ಆಚಾರ್ಯ, ಸ್ಥಳೀಯರಾದ ಎಲ್ಲಪ್ಪ ಟಿ.ಸಾಲ್ಯಾನ್, ವಿಲ್ಸನ್ ರೋಡ್ರಿಗಸ್, ಕೇಸರಿ ಪಿ, ವನಿತಾ ಪೂಜಾರಿ, ರೈ ಜಯಲಕ್ಷ್ಮೀ, ಡೆನ್ನಿಸ್ ಡಿಸೋಜ, ಜಾಯ್ ಡಿಸೋಜ, ವಿಜಯ ಶೆಟ್ಟಿ, ಫ್ರಾನ್ಸಿಸ್ ಡಿಸೋಜ, ಹರಿಪ್ರಸಾದ್ ಶೆಟ್ಟಿ, ದಿನೇಶ್ ದೇವಾಡಿಗ, ಧನಂಜಯ ಕವತ್ತಾರ್, ಶುಭ ಭಂಡಾರಿ, ಗುತ್ತಿಗೆದಾರ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net