ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿಗೆ ನೇಮಕ

kollur
Published on

ಕುಂದಾಪುರ: ರಾಜ್ಯ ಧಾರ್ಮಿಕ ಪರಿಷತ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಒಂಭತ್ತು ಸದಸ್ಯರನ್ನು ನೇಮಿಸಿದೆ.

ಅರ್ಚಕ ಸದಸ್ಯರಾಗಿ ಕೆ.ರಾಧಾಕೃಷ್ಣ ಅಡಿಗ ಬಾಳಗದ್ದೆ, ಮಹಿಳಾ ಸದಸ್ಯರಾಗಿ ಕೊಲ್ಲೂರಿನ ರತ್ನಾ ರಮೇಶ್ ವಿ. ಕುಂದರ್, ಮಚ್ಚಟ್ಟುವಿನ ಸಂಧ್ಯಾ ರಮೇಶ್, ಪರಿಶಿಷ್ಟ ಜಾತಿಯಿಂದ ಸೇನಾಪುರ ಗ್ರಾಮದ ಗೋಪಾಲಕೃಷ್ಣ , ಸಾಮಾನ್ಯ ವಿಭಾಗದಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಚಿತ್ತೂರಿನ ಡಾ.ಅತುಲ್‌ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ ಯಡ್ತರೆ, ಶೇಖರ ಪೂಜಾರಿ ಕಾರ್ಕಡ ನೇಮಕಗೊಂಡಿದ್ದಾರೆ. ಇವರಲ್ಲಿ ಡಾ.ಅತುಲ್‌ಕುಮಾರ್ ಶೆಟ್ಟಿ ಹಾಗೂ ಜಯಾನಂದ ಹೋಬಳಿದಾರ ಎರಡನೇ ಬಾರಿಗೆ ಸದಸ್ಯರಾಗಿದ್ದಾರೆ. ಸದಸ್ಯರಾಗಲು ಬಯಸಿ ಒಟ್ಟು 158 ಅರ್ಜಿ ಸಲ್ಲಿಕೆಯಾಗಿತ್ತು ಎಂದು ಧಾರ್ಮಿಕ ಪರಿಷತ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net