16 ರಂದು ಪದಾಧಿಕಾರಿಗಳ ಪದಗ್ರಹಣ

Published on

ಕೊಳ್ಳೇಗಾಲ: ಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಜು.16 ರಂದು ಸಂಜೆ 6 ಗಂಟೆಗೆ ರೋಟರಿ ಸಂಸ್ಥೆ ವತಿಯಿಂದ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷ ಎಸ್.ನಂಜುಂಡಸ್ವಾಮಿ( ನಂದೀಶ್) ಹಾಗೂ ತಂಡದವರು ಪದವಿ ಸ್ವೀಕರಿಸುವರು. ವಿಕ್ರಂದತ್ತ ಪದವಿ ಪ್ರದಾನ ಮಾಡಲಿದ್ದಾರೆ. ವಲಯ-9 ಸಹಾಯಕ ಪ್ರಾಂತಪಾಲ ಆರ್.ಪ್ರಕಾಶ್, ವಲಯ ಪ್ರತಿನಿಧಿ ಎಸ್.ಬಸವರಾಜು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net