

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಉಪ್ಪಾರ ಜನಾಂಗದ ಹೊಸ ಬಡಾವಣೆಯಲ್ಲಿ ಭಾನುವಾರ 55 ಲಕ್ಷ ರೂ. ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಬಡಾವಣೆಯ 3 ಪ್ರತ್ಯೇಕ ರಸ್ತೆಗಳಲ್ಲಿ ಒಟ್ಟು 500 ಮೀಟರ್ ಉದ್ದಕ್ಕೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಸೋಮವಾರದಿಂದಲೇ ಕಾಮಗಾರಿ ಆರಂಭಿಸಿ 2 ತಿಂಗಳಲ್ಲಿ ಮುಕ್ತಾಯಗೊಳಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ನಾಗೇಂದ್ರ ಅವರಿಗೆ ಸೂಚನೆ ನೀಡಿದರು. ದೊಡ್ಡಿಂದುವಾಡಿ ಗ್ರಾಪಂ ಅಧ್ಯಕ್ಷ ಲೋಕೇಶ್, ಸದಸ್ಯರಾದ ಸುರೇಶ್, ಸತೀಶ್, ಮಾಜಿ ಸದಸ್ಯ ರಾಚಪ್ಪ, ಮುಖಂಡರಾದ ಸೋಮೇಶ್, ರಾಚಪ್ಪ, ರಂಗಸ್ವಾಮಿ, ಗುತ್ತಿಗೆದಾರ ಫಯಾಜ್ ಇದ್ದರು.