

ಚಾಮರಾಜನಗರ: ರೈತರು ಬೆಳೆದ ಕಬ್ಬು ಕಟಾವು ಮಾಡದ ಅಕಾರಿಗಳ ಬೇಜಾಬ್ದಾರಿ ನಡೆಯನ್ನು ಖಂಡಿಸಿ ಕಬ್ಬು ಬೆಳೆಗಾರರು ಕುಂತೂರು ಸಕ್ಕರೆ ಕಾರ್ಖಾನೆಯ ಮುಂಭಾಗ ಸೋಮವಾರ ಡೀರ್ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ ತಾಲೂಕಿನ ಗೊಬಳಿಪುರ ಹಾಗೂ ತೇರಂಬಳ್ಳಿ ಗ್ರಾಮದ 30ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಕಾರ್ಖಾನೆ ಮುಂಭಾಗ ಕುಳಿತು ರೈತರು ಬೆಳೆದ ಕಬ್ಬನ್ನು ತ್ವರಿತವಾಗಿ ಕಟಾವು ಮಾಡಿಕೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡ ಲೋಕೇಶ್, ತೇರಂಬಳ್ಳಿ ಮತ್ತು ಗೊಬಳಿಪುರ ಗ್ರಾಮದ ಭಾಗದಲ್ಲಿ ಕಬ್ಬು ಬೆಳೆದು 13 ತಿಂಗಳು ಕಳೆದಿದೆ. ಆದರೆ ಕುಂತೂರು ಸಕ್ಕರೆ ಕಾರ್ಖಾನೆ ಅಕಾರಿಗಳು ಕಬ್ಬಿನ ಕಟಾವಿಗೆ ಅವಕಾಶ ನೀಡಿಲ್ಲ. ಇದ್ದರಿಂದ ರೈತರಿಗೆ ಆರ್ಥಿಕ ಹೊರೆ ಬೀಳುತ್ತಿದೆ. ಮುಂದಿನ ಬೆಳೆಯನ್ನು ಬೆಳೆಯಲು ಕಷ್ಟವಾಗಿದೆ ಎಂದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಸಿಇಒ ಮಹದೇವಪ್ಪ ಕಬ್ಬು ಬೆಳೆಗಾರರಿಂದ ಮನವಿ ಪತ್ರ ಪಡೆದು ಅದಷ್ಟು ಬೇಗ ಕಬ್ಬು ಕಟಾವು ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರಾದ ತೊಂಟೇಶ್, ಮಹದೇವ ಪ್ರಭು, ಶಂಕರಪ್ಪ, ಮಹೇಂದ್ರ, ಅಭಿಷೇಕ್, ಮಹದೇವಪ್ಪ, ರಘು, ಗುರುಸ್ವಾಮಿ, ಗೊಬಳಿಪುರದ ರಾಜಪ್ಪ, ಮೂರ್ತಿ ಮತ್ತಿತರಿದ್ದರು.