ನಿಸರ್ಗ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ

21-kglphoto-3,,
Published on

ಕೊಳ್ಳೇಗಾಲ: ಪಟ್ಟಣದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎ.ಧನುಷ್ ರಾಷ್ಟ್ರ ಮಟ್ಟದಲ್ಲಿ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುವ ಜೆಇಇ ಮೇನ್( ಬಿ.ಆರ್ಕಿಟೆಕ್) 2024ನೇ ಸಾಲಿನ ಪ್ರವೇಶಾತಿ ಪರೀಕ್ಷೆಯಲ್ಲಿ ಎಸ್ಟಿ ಪ್ರವರ್ಗದಲ್ಲಿ ರಾಷ್ಟ್ರಕ್ಕೆ 18ನೇ ರ‌್ಯಾಂಕ್ ಪಡೆದಿದ್ದು, ಆಲ್ ಇಂಡಿಯಾ ರ‌್ಯಾಂಕಿಂಗ್‌ನಲ್ಲಿ ಸಾಮಾನ್ಯ ವರ್ಗದಲ್ಲಿ 1603 ನೇ ರ‌್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇದಲ್ಲದೆ ಎ.ಧನುಷ್ ಜೆಇಇ ಮೇನ್ (ಬಿ.ಟೆಕ್) ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ‌್ಯಾಂಕಿಂಗ್‌ನಲ್ಲಿ ಎಸ್ಟಿ ಪ್ರವರ್ಗದಲ್ಲಿ 2400ನೇ ರ‌್ಯಾಂಕ್ ಪಡೆದಿದ್ದಾರೆ. ಅಂತೆಯೇ, ಕೆ.ಪರಿಮಳಾ ಎಸ್ಟಿ ಪ್ರವರ್ಗದಲ್ಲಿ 10048, ಆರ್.ಮೌನಾ ಎಸ್ಟಿ ಪ್ರವರ್ಗದಲ್ಲಿ 10096, ಎಸ್.ಹೃಷಿಕಾನಾಯಕ್ ಎಸ್ಟಿ ಪ್ರವರ್ಗದಲ್ಲಿ 10321, ಎಂ.ಶಾಂತಕುಮಾರ್ ಎಸ್ಸಿ ಪ್ರವರ್ಗದಲ್ಲಿ 25897, ಆರ್.ರಮ್ಯಾ ಎಸ್ಟಿ ಪವರ್ಗದಲ್ಲಿ 29493, ವಿ.ಧನುಷ್ ಒಬಿಸಿ ಪ್ರವರ್ಗದಲ್ಲಿ 28219, ಜೈದ್‌ಖಾನ್ ಒಬಿಸಿ ಪ್ರವರ್ಗದಲ್ಲಿ 69118, ಎನ್. ಅನುಷಾ ಒಬಿಸಿ ಪ್ರವರ್ಗದಲ್ಲಿ 93234 ಮತ್ತು ಎಸ್. ಮೊಹಮ್ಮದ್ ಜೈದಾನ್ 93027 ರ‌್ಯಾಂಕ್ ಪಡೆದು ಜೆಇಇ( ಆಡ್ವಾನ್ಸ್) ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಎಸ್.ದತ್ತೇಶ್ ಕುಮಾರ್, ಅಧ್ಯಕ್ಷ ಎಸ್.ನಾಗರಾಜು, ಪ್ರಾಂಶುಪಾಲ ಡಿ.ಕೃಷ್ಣೇಗೌಡ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net