ಗಾರ್ನಿಯರ್ ಹೇರ್ ಕಲರಿಂಗ್‌ಗೆ ಕುಗ್ಗದ ಉತ್ಸಾಹ

15-KGLPHOTO-1.....
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39;
Published on

ಕೊಳ್ಳೇಗಾಲ: ಪಟ್ಟಣದ ಟಿಎಪಿಸಿಎಂಎಸ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿಯಿಂದ ಆಯೋಜಿಸಿದ್ದ ಮೂರು ದಿನಗಳ ಉಚಿತ ಹೇರ್ ಕಲರಿಂಗ್ ಅಭಿಯಾನದ ಕೊನೆಯ ದಿನವಾದ ಮಂಗಳವಾರ ಮಹಿಳೆಯರು ಹಾಗೂ ಪುರುಷರು, ಯುವಕರು ನೂರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮಿಚ್ಛೆಯ ಬಣ್ಣಗಳನ್ನು ಹಾಕಿಸಿಕೊಂಡು ಸಂತಸಪಟ್ಟರು.

ಈ ವೇಳೆ ನಗರಸಭೆ ಮಾಜಿ ಅಧಕ್ಷೆ ರೇಖಾ ರಮೇಶ್ ಹಾಗೂ ಧರ್ಮಸ್ಥಳ ಸಂಘದ ಮಹಿಳೆಯರು, ವಿವಿಧ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ದೇಶದ ಹೆಸರಾಂತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ಮಾದರಿಯ ಸಲೂನ್ ವ್ಯವಸ್ಥೆಗೊಳಿಸಿದ್ದು, ಪುರುಷ, ಮಹಿಳೆಯರು ಪ್ರತ್ಯೇಕವಾಗಿ ಹೇರ್ ಕಲರಿಂಗ್ ಮಾಡಿಸಿಕೊಂಡರು. ಹೇರ್ ಕಲರಿಂಗ್ ಮಾಡಿದ ಸ್ಥಳದಲ್ಲಿಯೇ ಹೇರ್ ಕ್ಲೀನಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಉಚಿತ ಹೇರ್ ಕಲರಿಂಗ್ ಅಭಿಯಾನವನ್ನು ವ್ಯವಸ್ಥಿತವಾಗಿ ರೂಪಿಸಲಾಗಿತ್ತು. ಸಾರ್ವಜನಿಕರಿಗೆ ಪ್ರತಿಷ್ಠಿತ ಗಾರ್ನಿಯರ್ ಕಂಪನಿ ಕಲರಿಂಗ್ ತಲುಪಬೇಕೆಂಬುದು ಒಳ್ಳೆಯ ಉದ್ದೇಶವಾಗಿದೆ. ಈ ಅವಕಾಶ ಕೊಟ್ಟ ವಿಜಯವಾಣಿಗೆ ಧನ್ಯವಾದಗಳು. ಗಾರ್ನಿಯರ್ ಕಂಪನಿ ಸಿಬ್ಬಂದಿ ಈ ಕಲರ್ ಹಾಕುವುದರಲ್ಲಿ ಪರಿಣಿತರಾದ್ದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆತಿದೆ.
ರೇಖಾ ರಮೇಶ್, ಮಾಜಿ ಅಧ್ಯಕ್ಷೆ, ನಗರಸಭೆ, ಕೊಳ್ಳೇಗಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net