ಆಟೋಗೆ ಬಸ್ ಡಿಕ್ಕಿಯಾಗಿ ಇಬ್ಬರು ಸಾವು

Published on

ಕೊಳ್ಳೇಗಾಲ: ತಾಲೂಕಿನ ಧನಗೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ (209)ಯಲ್ಲಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ, ಆಟೋದಲ್ಲಿದ್ದ ನಾಲ್ವರು ಪ್ರಯಾಣಿಕರ ಪೈಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲೂಕಿನ ಶಿವನಸಮುದ್ರ ಸಮೀಪದ ದರ್ಗಾ ನಿವಾಸಿಯಾದ ಸೈಯದ್ ಮನ್ಸೂರ್ ಹುಸೈನ್ (37), ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ನೂರಜಾನ್ (67) ಮೃತರು. ಅದೇ ಗ್ರಾಮದ ರೆಹಮತ್ ಉನ್ನಿಸಾ (48), ಬೆಂಗಳೂರಿನ ಶಂಶಾದ್ ಬೇಗಂ( 51) ಗಾಯಗೊಂಡವರು.

ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ಕೊಳ್ಳೇಗಾಲದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ನೂರಜಾನ್ ಅವರ ಸೊಸೆಯನ್ನು ನೋಡಲು ಆಟೋದಲ್ಲಿ ತೆರಳುತ್ತಿದ್ದ ವೇಳೆ ಧನಗೆರೆ ಗ್ರಾಮದ ಬಳಿ ಕೊಳ್ಳೇಗಾಲದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದ್ದು. ಆಟೋದಲ್ಲಿದ್ದ ಚಾಲಕ ಸೈಯದ್ ಮನ್ಸೂರ್ ಹುಸೈನ್ ಹಾಗೂ ನೂರಜಾನ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ನಂತರ, ತೀವ್ರ ಗಾಯಗೊಂಡಿದ್ದ ಶಂಶಾದ್ ಬೇಗ್ ಹಾಗೂ ರೆಹಮತ್ ಉನ್ನಿಸಾ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರ ಸಲಹೆಯಂತೆ ಶಂಶಾದ್ ಬೇಗ್ ಅವರಿಗೆ ಕೈ, ಕಾಲಿಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಕೆಎಸ್‌ಆರ್‌ಟಿಸಿ ಡಿಸಿ ಅಶೋಕ್‌ಕುಮಾರ್ ಭೇಟಿ ನೀಡಿ, ಸಿಪಿಐ ಶಿವಮಾದಯ್ಯ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಣೇಶ್ ಅವರಿಂದ ಅಪಘಾತ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net