ಬಸ್ ಡಿಕ್ಕಿ ಹೊಡೆದು ಪಾದಚಾರಿ ಸಾವು

Published on

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಪ್ರೀತಮ್ ವೈನ್ಸ್ ಎದುರಿನ ರಸ್ತೆಯಲ್ಲಿ ಬುಧವಾರ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿಯೊಬ್ಬರು ಮೃತಪಟ್ಟರು.

ತಾಲೂಕಿನ ತೆಳ್ಳನೂರು ಗ್ರಾಮದ ಬಸವಯ್ಯ(58) ಮೃತಪಟ್ಟವರು. ಬಸವಯ್ಯ ಅವರು ತನ್ನ ಮಗಳು ವಾಸವಿದ್ದ ಮುಳ್ಳೂರು ಗ್ರಾಮದಿಂದ ಆಟೋ ಮೂಲಕ ಬಂದು ಪಟ್ಟಣದ ಪ್ರೀತಮ್‌ವೈನ್ಸ್ ಮುಂಭಾಗ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತೆರಳುವಾಗ ಶಾಗ್ಯ ಗ್ರಾಮದಿಂದ ಬಸ್ ನಿಲ್ದಾಣ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸವಯ್ಯ ಅವರಿಗೆ ತಲೆ ಹಾಗೂ ಭುಜಕ್ಕೆ ಗಂಭೀರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಪುತ್ರ ಮಾದೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಸ್ ಅನ್ನು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮರಣೊತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net