ಎಸ್.ಬಾಲರಾಜು ಅಭಿಮಾನಿಗಳ ಸಂಭ್ರಮ

13-kglphoto-6,
Published on

ಕೊಳ್ಳೇಗಾಲ: ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜು ಅವರನ್ನು ಚಾಮರಾಜನನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದ ಹಿನ್ನಲೆ ಎಸ್.ಬಾಲರಾಜು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಅಚ್ಗಾಳ್ ಯಾತ್ರಿನಿವಾಸ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಕರಿಗೆ ಸಿಹಿ ಹಂಚುವ‌ ಮೂಲಕ ಸಂಭ್ರಮಿಸಿದರು. 

ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ ಪರಮೇಶ್ವರಯ್ಯ, ನಗರಸಭೆ ಸದಸ್ಯರಾದ ಕವಿತಾ,  ನಾಶೀರ್ ಷರೀಪ್, ಚಿಂತುಪರಮೇಶ್, ಮುಖಂಡರಾದ ಅಣಗಳ್ಳಿ ಬಸವರಾಜು ಕಿರಣ್, ದಿನೇಶ್ ಗುಪ್ತ, ಜೀ ಬಜಾರ್ ಮಹದೇವಪ್ಪ, ಉತ್ತಮ್, ಭಾಸ್ಕರ್, ಷಣ್ಮುಖ ಚಿಲಕವಾಡಿ, ಶಾಂತರಾಜು ಆಟೋ, ವಿಜಯ್ ಕುಮಾರ್ ಮಧುವನಹಳ್ಳಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net