ಸಂವಿಧಾನ ಉಳಿಸಲು ಎಲ್ಲರೂ ಕೈಜೋಡಿಸಿ

13-KGLPHOTO-1,
Published on

ಕೊಳ್ಳೇಗಾಲ: ಸಂವಿಧಾನ ಉಳಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಆಲೋಚನೆ ಮಾಡಬೇಕೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಎದ್ದೇಳು ಕರ್ನಾಟಕ ವತಿಯಿಂದ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ದೇಶಿಸಿ ಮತನಾಡಿದರು.

ನಾವೆಲ್ಲರೂ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿಗಳ ಬಗ್ಗೆ ಜಾಗೃತರಾಗಿಬೇಕು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಲೋಚನೆ ಮಾಡಿ ಮತದಾರರು ಮತ ನೀಡಬೇಕೆಂದು ಎಂದರು.
ಸಾಹಿತಿ ವೆಂಕಟರಾಜು ಮಾತನಾಡಿದರು. ಎದ್ದೇಳು ಕರ್ನಾಟಕ ಸಂಘಟನೆಯ ತಾರಾರಾವ್, ವಾಸುಕಿ, ಲೋಕೇಶ್ ನಾಯಕ್, ಶಿವಕುಮಾರ್, ರೈತ ಮುಖಂಡ ಗುರುಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net