

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ದಿ.ಕೆ.ಶಿವರಾಂ ಅವರಿಗೆ ತಾಲೂಕು ಛಲವಾದಿ ಮಹಾಸಭೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಛಲವಾದಿ ಮಹಾಸಭಾ ಸದಸ್ಯರು ಕೆ.ಶಿವರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಮಾತನಾಡಿ, ಕೆ.ಶಿವರಾಂ ಅವರು ಸದಾ ಜನರ ಸೇವೆಯಲ್ಲಿ ತೊಡಗಿದ್ದವರು. ಅಧಿಕಾರಿಯಾಗಿ ಹಲವು ಬಡವರಿಗೆ ನೆರವಿನ ಕೆಲಸ ಮಾಡಿದ್ದಾರೆ ಎಂದರು.
ಛಲವಾಧಿ ಮಹಾಸಭೆಯ ಸದಸ್ಯ ಚಾಮರಾಜು ಸಿದ್ದಯ್ಯನಪುರ, ರಾಜಪ್ಪ, ಜೆ. ನಿಂಗರಾಜು, ದಶರಥ್, ಬಸವರಾಜು, ಶಾಂತರಾಜು, ಗೋವಿಂದರಾಜು, ನವೀನ್ ಕುಮಾರ್, ಲಿಂಗರಾಜು ಮಾಸ್ಟರ್, ಮಹದೇವ, ಸಿ.ಮಹದೇವು ಇದ್ದರು.