

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಬಡಾವಣೆಯಲ್ಲಿರುವ ಮಾತೆ ಸಾವಿತ್ರಿಬಾಯಿ ಫುಲೆ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಅಭಿಮಾನಿಗಳು ಸೋಮವಾರ ದಿ. ಆರ್.ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಪೂಜೆ ಸಲ್ಲಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಆರ್.ಧ್ರುವನಾರಾಯಣ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇಂದಿಗೆ ನಮ್ಮನ್ನು ಅಗಲಿ ಅವರು ಒಂದು ವರ್ಷವಾಗಿದೆ. ಆದರೆ, ಮಾನಸಿಕವಾಗಿ ಸದಾ ನಮ್ಮ ಮನಸ್ಸಿನಲ್ಲಿ ಉಳಿದಿದ್ದಾರೆ. ಆರ್.ಧ್ರುವನಾರಾಯಣ ಅವರು ಬಿಟ್ಟು ಹೋಗಿರುವ ಅಭಿವೃದ್ಧಿ ಕೆಲಸಗಳು ಸದಾ ಅವರನ್ನು ಜೀವಂತವಾಗಿರಿಸುತ್ತವೆ ಎಂದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಕುಮಾರ್, ನಗರಸಭೆ ಸದಸ್ಯ ಜಿ.ಎಂ.ಸುರೇಶ್, ಭೀಮಾನಗರದ ಯಜಮಾನ ಸಿದ್ದಪ್ಪ, ಮುಖಂಡ ಸುಬ್ರಮಣ್ಯ, ನಾರಾಯಣ, ಕೃಷ್ಣರಾಜು, ರಾಜೇಂದ್ರ, ಜಗದೀಶ್, ಪ್ರಕಾಶ್, ಶಿವಮೂರ್ತಿ ಶರತ್ ಮತ್ತಿತರಿದ್ದರು.