

ಕೊಳ್ಳೇಗಾಲ:ರಾಜ್ಯ ನೇಕಾರ ಸಮುದಾಯಗಳ ಒಕ್ಕೂ ಟದ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಪಟ್ಟಣದ ದೇವಾಂಗ ಪೇಟೆ ನಿವಾಸಿ, ನಗರಸಭಾ ಮಾಜಿ ನಾಮ ನಿರ್ದೇಶಿತ ಸದಸ್ಯ ಎನ್. ಮಧುಚಂದ್ರ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ನೇಕಾರ ಸಮುದಾಯಗಳ ಸಂಘಟನೆ ಹಾಗೂ ಬಲವರ್ಧನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಸ್. ಸೋಮಶೇಖರ್ ಅವರು ಎನ್. ಮಧುಚಂದ್ರ ಅವರನ್ನು ನೇಕಾರ ಸಮುದಾಯ ಒಕ್ಕೂಟದ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ನೇಮಿಸಿದ್ದಾರೆ.
ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷ ಎನ್.ಮಧುಚಂದ್ರ ಮಾತನಾಡಿ, ಜಿಲ್ಲಾದ್ಯಂತ ನೇಕಾರ ಸಮುದಾಯಗಳ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನಗೆ ಕೊಟ್ಟಿರುವ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು.