ನಾಟಕಗಳನ್ನು ನೋಡುವುದರಿಂದ ಹೆಚ್ಚು ಮನರಂಜನೆ

10-kglphoto-4
Published on

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕಲೆಗೆ ಹೆಸರುವಾಸಿಯಾಗಿದ್ದು, ಕಂಡಾಯ ಕೋಳಿ ಎಂಬ ನಾಟಕದ ಹೆಸರೇ ಬಹಳ ಕೌತುಕವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಜೋಗಿ ರಂಗಜೋಳಿಗೆಯ 15ನೇ ವರ್ಷದ ಸಂಭ್ರಮಾಚಣೆ ಅಂಗವಾಗಿ ಚಾಮರಾಜನಗರ ಈಶ್ವರಿ ಸೋಷಿಯಲ್ ಟ್ರಸ್ಟ್, ಯಳಂದೂರು ಮ್ಯೂಸಿಕಲ್ ಟ್ರಸ್ಟ್, ಕೊಳ್ಳೇಗಾಲದ ಅಪ್ಟು ಟೀಂ ವತಿಯಿಂದ ಭಾನುವಾರ ಆಯೋಜಿಸಿದ್ದ ಮಂಜು ಕೋಡಿ ಉಗನೀಯ ರಚನೆ ಕಂಡಾಯದ ಕೋಳಿ ನಾಟಕ ಪ್ರದರ್ಶನ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು ಅವರಿಗೆ ಭಾವಪೂರ್ಣ ರಂಗನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರಾಣಿಕ ನಾಟಕದ ಕಲೆಯ ತೆಗೆದುಕೊಂಡರೆ ಡಾ.ರಾಜ್ ಕುಮಾರ್ ಅವರಿಂದಲೆ ಕಂಡಿದ್ದೇವೆ. ನಮಗೂ ಈ ರಾಜಕೀಯದ ಜಂಜಾಟದ ನಡುವೆ ಇಂತಹ ನಾಟಕಗಳನ್ನು ನೋಡುವ ಆಸೆಯಿದೆ. ಇಂತಹ ಕಾರ್ಯಕ್ರಮದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ. ಕಂಡಾಯದ ಕೋಳಿ ನಾಟಕದ ಹೆಸರೆ ಕೌತುಕ ಮೂಡಿಸುತ್ತಿದೆ ಎಂದರು.

ಕಂಡಾಯದ ಕೋಳಿನಾಟಕ ರಚನೆಯ ನಿರ್ಮಾತೃ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಕಂಡಾಯ ಕೋಳಿ ನಾಟಕವನ್ನು ನನ್ನ ಎರಡನೇಯ ಕಥಾಸಂಕಲ. ಬೆಟ್ಟ ಬೇಗೆಯಲ್ಲಿರುವ ಚಾಮೀಯ ಕೋಳಿಯು, ಮಂಟೇಸ್ವಾಮಿ ಕಂಡಾಯವೋ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ. ಈಗಾಗಲೇ ನಾಟಕ 5 ಪ್ರದರ್ಶನ ಕಂಡಿದ್ದು, ಕೊಳ್ಳೇಗಾಲದಲ್ಲಿ 6ನೇ ಪ್ರದರ್ಶನ ಕಾಣುತ್ತಿದೆ. 2016ರಲ್ಲಿ ಬೆಟ್ಟ ಬೇಗೆ ಕಥಾ ಸಂಕಲನ ಬಿಡುಗಡೆ ಕಂಡಿತ್ತು ಎಂದರು.

ಈ ವೇಳೆ ನಿವೃತ್ತ ಕೆಎಎಸ್ ಅಧಿಕಾರಿ ದಿ.ಕೆ.ಶಿವರಾಮು ಹಾಗೂ ತಹಸೀಲ್ದಾರ್ ದಿ.ಉದಯ್ ಕುಮಾರ್ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಕಲಾವಿದರು ಪುಷ್ಪಾರ್ಚನೆ ಮಾಡಿ ರಂಗನಮನ ಸಲ್ಲಿಸಿದರು. ಮುಡಿಗುಂಡ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ರಾಚಪ್ಪ, ಬಿಇಒ ಮಂಜುಳಾ, ಕಸಾಪ ತಾಲೂಕು ಅಧ್ಯಕ್ಷ ಎಸ್.ನಾಗರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಬಾಬು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಕೆ.ಮಹೇಶ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕಸಬಾ ಪಿಎಸಿಸಿ ಬ್ಯಾಂಕ್ ಸಿಇಒ ನಾಗರಾಜು, ಜೋಗಿ ರಂಗಜೋಳಿಗೆಯ ಅಧ್ಯಕ್ಷ ಜೆ. ಮುಡಿಗುಂಡ ಮೂರ್ತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net