ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಮೇವು ತಿಂದು ಕೊಟ್ಟಿಗೆಯಲ್ಲಿ ಮಲಗಿದ್ದ 1 ಕರು ಸೇರಿದಂತೆ 5 ಹಸುಗಳು ಬೆಳಗಾಗುವಷ್ಟರಲ್ಲಿ ನಿಗೂಢವಾಗಿ ಮೃತಪಟ್ಟಿವೆ.
ಗ್ರಾಮದ ಮಹದೇವಶೆಟ್ಟಿ ಅವರ ಪುತ್ರ ನಾಗ ಅವರ ಹಸುಗಳು ಮೃತಪಟ್ಟಿವೆ. ಗುರುವಾರ ರಾತ್ರಿ ತಮ್ಮ 2 ಕರು, 4 ಹಸುಗಳಿಗೆ ಮೇವು, ನೀರು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಅಲ್ಲಿವರೆಗೂ ಹಸುಗಳು ಲವಲವಿಕೆಯಿಂದ ಇದ್ದವು. ಎಂದಿನಂತೆ ಶುಕ್ರವಾರ ಬೆಳಗ್ಗೆ ಎಂದು ಕೊಟ್ಟಿಗೆಗೆ ಬಂದಾಗ 1 ಕರು ಸೇರಿದಂತೆ 5 ಹಸುಗಳು ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂತು. ಈ ಬಗ್ಗೆ ಪಶು ವೈದ್ಯರಿಗೆ ಗ್ರಾಮಸ್ಥರು ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಪಶು ವೈದ್ಯ ಶಿವರಾಜು ಮೃತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದರು.