

ಕೊಳ್ಳೇಗಾಲ: ತಾಲೂಕಿನ ಜಾಗೇರಿ ಸಮೀಪದ ಪೇಪರ್ ಮಿಲ್ ಬಳಿ ನಾಡ ಬಂದೂಕು ಇಟ್ಟುಕೊಂಡು ಕಾಡು ಪ್ರಾಣಿ ಬೇಟೆಗೆ ಯತ್ನಿಸಿದ್ದ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಆರೋಪಿ ಸೋಮವಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ತಾಲೂಕಿನ ಜಾಗೇರಿಯ ಶಾಂತಿನಗರದ ನಿವಾಸಿ ಥಾಮಸ್ (45) ಬಂಧಿತ. ಈತ ಚೆನ್ನಿಪುರದೊಡ್ಡಿ ಗ್ರಾಮದ ನಿವಾಸಿ ಕೆಂಪೇಗೌಡ ಎಂಬುವನೊಂದಿಗೆ ಬಂದೂಕು ಇಟ್ಟುಕೊಂಡು ಕಾಡು ಪ್ರಾಣಿ ಬೇಟಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಪೊಲೀಸರು ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಆರೋಪಿ ಕೆಂಪೇಗೌಡ ಮಾತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಥಾಮಸ್ ತಪ್ಪಿಸಿಕೊಂಡಿದ್ದ. ಪೊಲೀಸರು ಸೋಮವಾರ ಥಾಮಸ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.