

ಕೊಳ್ಳೇಗಾಲ: ಆದಿದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿಯಿಂದ ಚಿತ್ರನಟ ಉಪೇಂದ್ರ ಬಂಧನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 11ನೇ ದಿನ ಪೂರೈಸಿತು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿಗೆ ಉತ್ತಂಬಳ್ಳಿ ಗ್ರಾಮಸ್ಥರು ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಸಿದ್ಧಾರ್ಥ, ಅಣಗಳ್ಳಿ ಬಸವರಾಜು, ಸುರೇಶ್, ಉತ್ತಂಬಳ್ಳಿ ಗ್ರಾಮದ ದಲಿತ ಯಜಮಾನರು ಹಾಗೂ ಮುಖಂಡರು ಹಾಜರಿದ್ದರು.