

ಕೊಳ್ಳೇಗಾಲ: ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡ ನಗರದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಳವಡಿಸಿದ್ದ ಕ್ಯಾನ್‌ಬಾಕ್ಸ್ ಕಳ್ಳವಾಗಿದೆ.
ಗ್ರಾಮದ ಜಿ.ವಿ.ಗೌಡ ನಗರಕ್ಕೆ ಹೊಂದಿಕೊಂಡಂತೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆ ಸಾರ್ವಜನಿಕರ ಉಪಯೋಗಕ್ಕಾಗಿ 5ರೂ. ನಾಣ್ಯ ಚಾಲಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಇತ್ತೀಚೆಗೆ ನಡೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಆಕ್ವಾಶೈನ್ಸ್ ಟೆಕ್ನಾಲಜಿ ಕಂಪನಿ ನೀರಿನ ಘಟಕ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿತ್ತು.
ಆ.7 ರಂದು ಶುದ್ಧ ನೀರಿನ ಘಟಕದಲ್ಲಿದ್ದ ಕ್ಯಾನ್‌ಬಾಕ್ಸ್ ಕಳವಾಗಿದೆ. ಆ.10 ರಂದು ಆಕ್ವಾಶೈನ್ಸ್ ಟೆಕ್ನಾಲಜಿ ಕಂಪನಿ ಸಿಬ್ಬಂದಿ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್‌ಐ ಗಣೇಶ್ ಮುಂದಿನ ಕ್ರಮವಹಿಸಿದ್ದಾರೆ.