

ಕೊಳ್ಳೇಗಾಲ: ತಾಲೂಕಿನ ಚೆಲುವನಹಳ್ಳಿ ಗ್ರಾಮ ಹೊರ ವಲಯದಲ್ಲಿ ಜೂಜಾಡುತ್ತಿದ್ದ 8 ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಾಳ್ಯ ಗ್ರಾಮದ ಸುಬ್ಬನಾಯ್ಕ, ಕುನ್ನನಾಯ್ಕ, ಶಶಿಧರ, ಹರೀಶ್, ಬೆಟ್ಟನಾಯಕ, ಪರಮೇಶ್, ವೀರಭದ್ರ, ಲಿಂಗಾಚಾರಿ ಬಂಧಿತರು.
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪಿಎಸ್‌ಐ ಗಣೇಶ್ ತಂಡ ದಾಳಿ ನಡೆಸಿದೆ. ಬಂಧಿತರಿಂದ ಪಣಕ್ಕಿಟ್ಟಿದ್ದ 37,560 ರೂ.ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ವೀರೇಂದ್ರ, ಗಣೇಶ್ ಪೂಜಾರಿ, ವಿಜಯ, ಮನು, ಜಯಶಂಕರ್, ನವೀನ್, ವೃಷಭೇಂದ್ರ, ಅನಿಲ್ ಇದ್ದರು.