ಮಕ್ಕಳಿಗೆ ಸಂಸ್ಕಾರ ಕಲಿಸುವ ಸಂಸ್ಕೃತ

28-kollegal-1,,
Published on

ಕೊಳ್ಳೇಗಾಲ: ಪಟ್ಟಣದ ಶ್ರೀ ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಲ್ಲಿ ಗುರುವಾರ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಸಂಸ್ಕೃತ ನಿರ್ದೇಶನಾಲಯ ಬೆಂಗಳೂರು, ಶ್ರೀ ಮಲೆ ಮಹದೇಶ್ವರ ಸಂಸ್ಕೃತ ಪಾಠಶಾಲೆ ಹಾಗೂ ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಅಸ್ಮಾಕಂ ಸಂಸ್ಕೃತಮ್ ಸರಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗುಂಡೇಗಾಲ ಪಟ್ಟದ ಮಠ ಶ್ರೀ ಮಲ್ಲಿಕಾರ್ಜುಸ್ವಾಮೀಜಿ ಮಾತನಾಡಿ, ಸಂಸ್ಕೃತವು ಸಂಸ್ಕೃತಿ, ಸಂಸ್ಕಾರ ಕಲಿಸುತ್ತದೆ. ಸಂಸ್ಕೃತ ಕಲಿತರೆ ಎಲ್ಲ ಭಾಷೆಯನ್ನೂ ಕಲಿಸಲು ಸುಲಭವಾಗಿರುತ್ತದೆ. ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಉಚಿತವಾಗಿ ಸಂಸ್ಕೃತ ಕಲಿಸಲಾಗುತ್ತದೆ. ತರಗತಿ ಶುಲ್ಕವನ್ನು ಶಿಕ್ಷಕರೇ ಮಕ್ಕಳ ಪರವಾಗಿ ಭರಿಸುತ್ತಾರೆ. ಪಾಲಕರಲ್ಲಿ ಸಂಸ್ಕೃತವನ್ನು ಏಕೆ ಕಲಿಯ ಬೇಕು ಎಂಬ ಪ್ರಶ್ನೆ ಉದ್ಭವಿಸಬಹುದು. ಸಂಸ್ಕೃತ ಮಕ್ಕಳಿಗೆ ಸಂಸ್ಕಾರ ಕಲಿಸುತ್ತದೆ ಎಂದು ಹೇಳಿದರು.
ಸಂಸ್ಕೃತ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುತ್ತದೆ. ಮಕ್ಕಳಿಗೆ ಮುಂದೆ ಬಹಳ ಉಪಯೋಗವಾಗುತ್ತದೆ. ವಿದ್ಯಾಭ್ಯಾಸ ಜತೆಗೆ ಸಂಸ್ಕೃತ ಅಭ್ಯಾಸವನ್ನು ಮಾಡಿದರೆ ಒಳಿತು. ಸಂಸ್ಕೃತದಿಂದ ಸನಾತನ ಧರ್ಮ ಉಳಿಯುತ್ತದೆ ಎಂದು ತಿಳಿಸಿದರು.

ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಚ್.ಎಂ.ವೃಷಭೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಜಿಲ್ಲಾ ನಿರ್ದೇಶಕ ಇಂದ್ರೇಶ್, ಎಸ್.ಎಂ.ಎಸ್ ಸಂಸ್ಕೃತ ಕಾಲೇಜು ಪ್ರಾಂಶುಪಾಲ ಸಿ.ರಾಜಶೇಖರಮೂರ್ತಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು ಮಾಳಿಗೆ, ಮಹದೇಶ್ವರ ಐಟಿಐ ಪ್ರಾಂಶುಪಾಲ ಎಂ.ಮಹೇಶ್, ಗುರುಮಲ್ಲೇಶ್ವರ ಕಾನ್ವೆಂಟ್ ಮುಖ್ಯ ಶಿಕ್ಷಕಿ ಶಿವನಾಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net