ಮನೆ ಬೀಗ ಒಡೆದು ಹಣ ಕಳವು

Crime Logo
Published on

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಬೆಟ್ಟದ ಬಳಿಯಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ನಟರಾಜು ಎಂಬುವರ ಮನೆಯ ಬಾಗಿಲು ಒಡೆದು ಖದೀಮರು ಶುಕ್ರವಾರ 18 ಸಾವಿರ ನಗದು ಕಳವು ಮಾಡಿದ್ದಾರೆ.

ನಟರಾಜು ಕುಟುಂಬ ದೇವಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಮಧ್ಯಾಹ್ನ 1.30ರಿಂದ 3ಗಂಟೆ ಸಮಯದಲ್ಲಿ ಈ ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮುಟ್ಟದೆ ನಗದು ಮಾತ್ರ ಕಳವು ಮಾಡಿದ್ದಾರೆ. ಆಗರ ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಯ ಕರಿಬಸಪ್ಪ, ಪೇದೆಗಳಾದ ಶಿವಕುಮಾರ್, ಶ್ರೀಶೈಲಾ, ಉಸ್ಮಾನ್ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net