ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಬಡಾವಣೆಯಲ್ಲಿ ಇತ್ತೀಚೆಗೆ ಶ್ರೀ ಕುರುಬಕಟ್ಟೆ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಹುಚ್ಚೇಗೌಡನಕಟ್ಟೆ ಕೆರೆ ಬಳಿಯ ಅರಳಿ ಮರದ ಬಳಿ ಕಂಡಾಯಗಳನ್ನು ಸಂಪ್ರದಾಯದಂತೆ ಹೂವು, ಹೊಂಬಾಳೆಯಿಂದ ಅಲಂಕೃತಗೊಳಿಸಿ ಪೂಜೆ ಸಲ್ಲಿಸಲಾಯಿತು. ಗ್ರಾಮದ ಮುಖಂಡ ಮಹೇಶ್ ನೇತೃತ್ವದಲ್ಲಿ ಉತ್ಸವ ನಡೆಸಲಾಯಿತು. ಕಂಡಾಯ ಉತ್ಸವ ಸಾಗುವ ವೇಳೆ ಮಹಿಳೆಯರು ಪೂಜೆ ಸಲ್ಲಿಸಿದರು. ವಾದ್ಯ ಮೇಳಕ್ಕೆ ಯುವಕರು ಕುಣಿದು ಸಂಭ್ರಮಿಸಿದರು. ಮುಖಂಡರಾದ ಪಿ.ಕೆ.ಶ್ರೀನಿವಾಸಮೂರ್ತಿ, ಮಹೇಶ್, ಮೂರ್ತಿ, ಪಿ.ಸುಂದ್ರ, ಪಿ.ಮಹೇಶ್, ಮಾದೇವ, ರೇವಣ್ಣ ಮತ್ತಿತರರಿದ್ದರು.