ಟಗರಪುರದಲ್ಲಿ 12 ಮೇಕೆಗಳು ಸಾವು

Published on

ಕೊಳ್ಳೇಗಾಲ; ತಾಲೂಕಿನ ಟಗರಪುರ ಗ್ರಾಮದಲ್ಲಿ ಮೇಯಿಸಲು ಕರೆದೊಯ್ದಿದ್ದ 50 ಮೇಕೆಗಳ ಪೈಕಿ 12 ಮೇಕೆಗಳು ಮೃತಪಟ್ಟಿವೆ.
ಟಗರಪುರ ಗ್ರಾಮದ ಸೋಮಣ್ಣ ಎಂಬುವರಿಗೆ ಸೇರಿದ ಮೇಕೆಗಳು ಮೃತಪಟ್ಟಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ.

ಸೋಮಣ್ಣ ಎಂದಿನಂತೆ ಮೇಕೆ ಮೇಯಿಸಿಕೊಂಡು ಮನೆಗೆ ಬರುವಾಗ 12 ಮೇಕೆಗಳು ಮೃತಪಟ್ಟಿವೆ. 3 ಮೇಕೆಗಳು ಅಸ್ವಸ್ಥಗೊಂಡಿವೆ. ಕೊಳ್ಳೇಗಾಲದ ಪಶು ಆಸ್ಪತ್ರೆಗೆ ಮೃತಪಟ್ಟ ಮೇಕೆಗಳನ್ನು ರವಾನಿಸಿದ್ದು, ಪಶುವ್ಯೆದ್ಯ ಡಾ.ಶಿವಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮೈಸೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಲ್ಯಾಬರೋಟರಿಗೆ ಮೇಕೆ ಮರಿಯ ಹೊಟ್ಟೆಯಲ್ಲಿದ್ದ ಮೇವಿನ ಮಾದರಿ, ಕಿಡ್ನಿ ಹಾಗೂ ಲಿವರ್‌ನ ಭಾಗವನ್ನು ಕಳುಹಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net