

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡದ ಮುಳ್ಳಾಚ್ಚಮ್ಮ ದೇವಾ ಲಯದ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಗಾಯಗೊಂಡು ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಬುಧವಾರ ಮೃತಪಟ್ಟಿದ್ದಾರೆ.
ತಿ.ನರಸೀಪುರ ತಾಲೂಕು ಮಂಗಿಪಚ್ಚನ ಹುಂಡಿ ಗ್ರಾಮದ ಚಿಕ್ಕಮಲ್ಲೇಗೌಡ(55) ಮೃತ. ಕಳೆದ ಆ.15 ರಂದು ಮಂಗಿ ಪಚ್ಚನಹುಂಡಿ ಗ್ರಾಮದಿಂದ ತನ್ನ ಸಹೋದರಿ ಮನೆಗೆ ಬರುತ್ತಿದ್ದಾಗ ಮುಡಿಗುಂಡ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ 11.35 ರ ಸಮಯದಲ್ಲಿ ಮೇಟಗಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವರು ಕೊನೆಯುಸಿರೆಳೆದಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವ ಒಪ್ಪಿಸಿದ್ದಾರೆ.