ಮುಂದುವರಿದ ರೈತರ ಧರಣಿ

21-kollegal-1
Published on

ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಕಬಿನಿ ಕಚೇರಿಯ ಮುಂಭಾಗದಲ್ಲಿ ತಾಲೂಕು ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಪದಾಧಿಕಾರಿಗಳು ನಡೆಸುತ್ತಿರುವ ಧರಣಿ ಬುಧವಾರ ಮೂರನೇ ದಿನ ಪೂರೈಸಿತು.

ಗುಂಡಾಲ್ ಜಲಾಶಯದ ವ್ಯಾಪ್ತಿಯ ಕೆರೆಗಳು, ಕಾಲುವೆಗಳ ಸಮಸ್ಯೆಗಳ ಕುರಿತು ಸ್ಥಳಕ್ಕೆ ನೀರಾವರಿ ಇಲಾಖೆ ಎಂ.ಡಿ ಆಗಮಿಸಿ ಬಗೆಹರಿಸುವತನಕ ಪ್ರತಿಭಟನೆ ನಡೆಯಲಿದೆ ಎಂದು ಧಿಕ್ಕಾರ ಕೂಗುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ದಿನಗಳಿಂದ ರೈತರು ಪ್ರತಿಭಟಿಸಿದರೂ ಸ್ಥಳಕ್ಕೆ ಇಲಾ ಖೆಯ ಮೇಲಧಿಕಾರಿಗಳು ಬಂದಿಲ್ಲ. ರೈತರ ಹೋರಾಟ ಮಾಡುತ್ತಿದ್ದರು ನಿರ್ಲಕ್ಷೃ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ದಶರಥ, ಕಾರ್ಯದರ್ಶಿ ರಾಮಕೃಷ್ಣ, ಹಿತ್ತಲದೊಡ್ಡಿ ನಾಗರಾಜು, ಅನಂದ ಅಣಗಳ್ಳಿ, ಯಶವಂತ್ ಅಣಗಳ್ಳಿ, ಗೌರಮ್ಮ, ವೀರಭದ್ರಸ್ವಾಮಿ ಸರಗೂರು, ರಾಜಣ್ಣ ಮೋಳೆ, ಮಲ್ಲರಾಜು, ಕುಮಾರ್, ಮಹದೇವ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net