ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತೋತ್ಸವ-2024 ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪೊಲೀಸರ ವಶದಲ್ಲಿದ್ದ ಯುವಕನನ್ನು ಶನಿವಾರ ತಡ ರಾತ್ರಿ ಠಾಣಾ ಜಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.
ಕೊಳ್ಳೇಗಾಲದ ಬೆಂಗಳೂರು ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಾವಲು ವಾಹನದಲ್ಲಿ ತೆರಳುತ್ತಿದ್ದ ವೇಳೆ ಆನಂದಜ್ಯೋತಿ ಕಾಲನಿ ಬಳಿ ಇರಸವಾಡಿ ಪ್ರಸನ್ನ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದ್ದನು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವಕನ್ನು ವಶಕ್ಕೆ ಪಡೆದು ಪಟ್ಟಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಯುವಕನ ತಂದೆಯನ್ನು ಕರೆಸಿ ವಿಚಾರಣೆ ಮಾಡಿ ತಡರಾತ್ರಿ 1.30ರಲ್ಲಿ ಠಾಣಾ ಜಮೀನಿನ ಮೇಲೆ ಬಿಡುಗಡೆಗೊಳಿಸಿದರು.