

ಕೊಳ್ಳೇಗಾಲ: ಪಟ್ಟಣದ ಓಂ ಶಕ್ತಿ ದೇವಸ್ಥಾನದಲ್ಲಿ 38ನೇ ವಾರ್ಷಿಕೋತ್ಸವ ಹಾಗೂ ಆಷಾಢ ಮಾಸದ ಪ್ರಯುಕ್ತ ಕಳಸ, ದೀಪ, ಯಾಗಪೂಜೆ ಹಾಗೂ ಗಂಜಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೆ ದೇವಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ಸುಪ್ರಭಾತ ಸೇವೆ, ಮಂಗಳಾರತಿ, ಕಳಸ, ದೀಪಯಾಗ ಪೂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಕಾರ್ಯದಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಪತ್ನಿ ಮಂಜುಳಾ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ನಗರಸಭೆ ಸದಸ್ಯ ಮನೋಹರ್, ಸುಮಾ ಸುಬ್ಬಣ್ಣ, ರೇಖಾ, ಭಾಗ್ಯ, ಶ್ರೀಓಂ ಶಕ್ತಿ ದೇವಸ್ಥಾನ ಮಂಡಳಿ ಅಧ್ಯಕ್ಷೆ ಈಶ್ವರಿ ಶಿವಕುಮಾರ್, ಉಪಾಧ್ಯಕ್ಷೆ ಧನಲಕ್ಷ್ಮೀ ಮಾಣಿಕ್ಯಂ, ಪದಾಧಿಕಾರಿಗಳಾದ ಸುಮತಿ, ಭಾಗ್ಯಲಕ್ಷ್ಮೀ, ಪುಷ್ಪಲತಾ ಮತ್ತಿತರಿದ್ದರು.