ಶಿಬಿರದಲ್ಲಿ 185 ಜನರ ನೇತ್ರ ತಪಾಸಣೆ

11-kollegal-1
Published on

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಕಾಲೇಜು ಆವರಣದಲ್ಲಿ ಭಾನುವಾರ ಎಚ್.ಕೆ.ಟ್ರಸ್ಟ್, ಅರವಿಂದ್ ಕಣ್ಣಿನ ಆಸ್ಪತ್ರೆ ಕೊಯಮತ್ತೂರು, ನಾರಾಯಣ ಆಸ್ಪತ್ರೆ ಮೈಸೂರು, ರೋಟರಿ ಮಿಡ್‌ಟೌನ್ ಸಹಯೋಗದಲ್ಲಿ ಭಾನುವಾರ 30ನೇ ತಿಂಗಳ ಆರೋಗ್ಯ ತಪಾಸಣಾ ಹಾಗೂ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಎಚ್.ಕೆ.ಟ್ರಸ್ಟ್ ಸಂಸ್ಥೆ ಪ್ರತಿ ತಿಂಗಳ ಎರಡನೇ ಭಾನುವಾರ ನಿರಂತರವಾಗಿ ಕಣ್ಣಿನ ತಪಾಸಣೆ ಶಿಬಿರ ನಡೆಸಿಕೊಡು ಬರುತ್ತಿರುವುದು ಪ್ರಶಂಸನೀಯ. ಇಂತಹ ಶಿಬಿರಗಳಿಂದ ಗ್ರಾಮೀಣ ಭಾಗದ ಬಡವರಿಗೆ ತುಂಬ ಅನುಕೂಲವಾಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಿಬಿರದಲ್ಲಿ 185 ಜನರು ತಪಾಸಣೆಗೆ ಒಳಪಡಿಸಲಾಯಿತು. ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ 38 ಜನರನ್ನು ಆಯ್ಕೆ ಮಾಡಲಾಯಿತು ಹಾಗೂ ನಾರಾಯಣ ಹೃದಯಾಲಯ ಆಸ್ಪತ್ರೆಗೆ 14 ಜನರನ್ನು ಕರೆದೊಯ್ಯಲಾಯಿತು. ವಿಶ್ವ ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಡಿವೈಎಸ್ಪಿ ಮಹಾನಂದ, ರೋಟರಿ ಸಂಸ್ಥೆ ಕಾರ್ಯದರ್ಶಿ ಪ್ರಶಾಂತ್, ವಿವೇಕಾನಂದ ಡ್ರೈವಿಂಗ್ ಸ್ಕೂಲ್‌ನ ರಾಜೇಶ್, ಅರವಿಂದ ಆಸ್ಪತ್ರೆಯ ಡಾ.ದಿವ್ಯಾರಾಣಿ, ಡಾ.ಶ್ರೇಯಾ ಹಾಗೂ ನಾರಾಯಣ ಆಸ್ಪತ್ರೆ ವ್ಯದ್ಯೆ ಡಾ.ಪೂರ್ಣಿಮಾ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net