ಜೀವನ ಪ್ರಜ್ವಲಿಸಬೇಕಾದರೆ ಶಿಕ್ಷಣವಂತರಾಗಿ

11-kollegal-1
Published on

ಕೊಳ್ಳೇಗಾಲ: ಪಟ್ಟಣದ ರಾಮಮಂದಿರದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗದಲ್ಲಿ ಶೇ.70ಕ್ಕೂ ಹೆಚ್ಚು ಅಂಕ ಪಡೆದ 34 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಿ ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮುಳ್ಳೂರು ಪಿ.ಸಿದ್ದಪ್ಪಾಜಿ ಮಾತನಾಡಿ, ನಮ್ಮ ಸಮಾಜದ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕಾದರೆ ತಾಯಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ತಾಯಿಯೇ ಮೊದಲ ಗುರು. ವಿದ್ಯಾರ್ಥಿ ಜೀವನ ಚಿನ್ನದ ಜೀವನ, ಅದು ಪ್ರಜ್ವಲಿಸಬೇಕಾದರೆ ಹೆಚ್ಚಾಗಿ ಶಿಕ್ಷಣವಂತರಾಗಬೇಕು ಎಂದರು.

ವಿದ್ಯಾರ್ಥಿಗಳು ಸತತವಾಗಿ ಅಭ್ಯಾಸ ಮಾಡುವ ಮೂಲಕ ಜ್ಞಾನವಂತರಾಗಬೇಕು. ಹೆಚ್ಚಿನ ಜ್ಞಾನ ಪಡೆಯುವ ಮೂಲಕ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು. ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ.ಪಿ.ಸಿದ್ದರಾಜು, ಮಾಜಿ ಅಧ್ಯಕ್ಷ ಆರ್.ರವಿ, ಮೈಸೂರಿನ ನಾರಾಯಣ ಹೃದಯಾಲಯ ಹೃದ್ರೋಗ ತಜ್ಞ ಡಾ.ಕೇಶವಮೂರ್ತಿ, ಚಿಕ್ಕಲ್ಲೂರು ಹೊಸಮಠ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪಾಜಿ, ಮಾನಸ ಶಿಕ್ಷಣ ಸಂಸ್ಥೆ ಡಾ.ದತ್ತೇಶ್ ಕುಮಾರ್, ಮೈಸೂರಿನ ಹರಿ ವಿದ್ಯಾಲಯ ಸಹ ಶಿಕ್ಷಕ ವಿ.ಗಣೇಶ್, ಮಿಮಿಕ್ರಿ ರಮೇಶ್ ಬಾಬು, ವಿಶ್ವಕರ್ಮ ಸಮಾಜ ಖಜಾಂಚಿ ಸಂಪತ್‌ಕುಮಾರ್, ಮುಖಂಡರಾದ ಸಂಪತ್.ಜೆ, ಕಿರಣ್, ವಿನಯ್, ಗೌತಮ್, ನವೀನ್, ನಾಗೇಂದ್ರ, ಸ್ವಾಮಿ, ಸೂರ್ಯಪ್ರಕಾಶ್, ಅಭಿ, ಜಿ.ಶಾಂತರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net