ಆಲಹಳ್ಳಿ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅಂತ್ಯಕ್ರಿಯೆ

Published on

ಕೊಳ್ಳೇಗಾಲ: ಲಿಂಗೈಕ್ಯರಾದ ತಾಲೂಕಿನ ಆಲಹಳ್ಳಿ ಪಟ್ಟದ ಮಠದ ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ (77) ಅವರ ಅಂತ್ಯಕ್ರಿಯೆ ಗುರುವಾರ ನೆರವೇರಿತು.

ಮಠದ ಆವರಣದಲ್ಲಿ ಕ್ರೀಯಾ ಸಮಾಧಿಯಲ್ಲಿ ಶ್ರೀಗಳ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ವಾಮೀಜಿ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿ-ವಿಧಾನ ನೆರವೇರಿಸಲಾಯಿತು. ಬೆಳಗ್ಗೆ 8ರಿಂದ 3 ಗಂಟೆಯವರೆಗೆ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಕ್ರೀಯಾ ಸಮಾಧಿ ಬಳಿ ಶ್ರೀಗಳ ಪಾರ್ಥಿವ ಶರೀರವನ್ನು ತಂದು ಸುತ್ತೂರಿನ ವೀರ ಸಿಂಹಾಸನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸೋಮಳ್ಳಿ ಮಠದ ಶ್ರೀಸಿದ್ದಮಲ್ಲ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೈಸೂರು ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ, ಮಲ್ಲನಮೂಲೆಯ ಶ್ರೀಚನ್ನಬಸಪ್ಪ ಸ್ವಾಮೀಜಿ, ಆಲಹಳ್ಳಿ ಮಠದ ಉತ್ತರಾಧಿಕಾರಿಗಳಾದ ಶ್ರೀನಾಗೇಂದ್ರ ಸ್ವಾಮೀಜಿ ಹಾಗೂ ನೂರಾರು ಹರಗುರು ಚರಮೂರ್ತಿಗಳ ಭಾಗಿಯಾಗಿದ್ದರು. ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಬಾಲರಾಜು, ನಿರಂಜನ್ ಹಾಗೂ ಚಾಮರಾಜನಗರ, ಮೈಸೂರು, ಹಾಸನ, ತುಮಕೂರು ಸೇರಿದಂತೆ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು. ಭಕ್ತರಿಗೆ ಮಠದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net