ಭರಚುಕ್ಕಿ ಜಲಪಾತೋತ್ಸವ ವೈಭವ

7-kollegal-6
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 40;
Published on

ಕೊಳ್ಳೇಗಾಲ: ರಂಗುರಂಗಿನ ಬೆಳಕಿನಲ್ಲಿ ಭೋರ್ಗರೆದು ನರ್ತಿಸುವ ಜಲಧಾರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುವ ಆಕರ್ಷಣೀಯ ಜಲಪಾತೋತ್ಸವವನ್ನು ಕಣ್ತುಂಬಿಕೊಳ್ಳುವ ಸಮಯ ಸನ್ನಿಹಿತವಾಗಿದೆ.

ತಾಲೂಕಿನ ಶಿವಸಮುದ್ರದ ಸುಪ್ರಸಿದ್ಧ ಭರಚುಕ್ಕಿ ಜಲಪಾತೋತ್ಸವ ಆ.10ರಂದು ನಿಗದಿಗೊಂಡಿದೆ. ಚೆಲುವ ಚಾಮರಾಜನಗರ ಅಭಿಯಾನ ಅಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಸಮಾರಂಭ ತಯಾರಿಯಲ್ಲಿ ಜಿಲ್ಲಾಡಳಿತ ಕೈಗೊಂಡಿದ್ದು ಕೆಲಸ, ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ಬಾರಿ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗಿದೆ. ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಭರ್ತಿಯಾಗಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಭರಚುಕ್ಕಿ ಜಲಪಾತದ ಬೆಡಗನ್ನು ಇಮ್ಮಡಿಗೊಳಿಸಿದೆ.

2014ರಲ್ಲಿ ಭರಚುಕ್ಕಿ ಜಲಪಾತೋತ್ಸವ ಏರ್ಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವರ್ಣರಂಜಿತ ವಿದ್ಯುತ್ ದೀಪಾಲಂಕಾರದ ಜಲವೈಭವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರು ಕಣ್ತುಂಬಿಕೊಂಡಿದ್ದರು. ನಂತರ, ಜಲಪಾತೋತ್ಸವ ಸಮಾರಂಭ ನಡೆದಿರಲಿಲ್ಲ. ಆದರೀಗ ಸರ್ಕಾರ ಕಾನನದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಭರಚುಕ್ಕಿ ವೈಭವವನ್ನು ಪ್ರವಾಸಿ ಪ್ರಿಯರಿಗೆ ಉಣಬಡಿಸಲು ತೀರ್ಮಾನಿಸಿದೆ. ಹಾಗಾಗಿ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ.
ಭರದ ಸಿದ್ಧತೆ: ಜಲಪಾತೋತ್ಸವಕ್ಕೆ ಬುಧವಾರದಿಂದ ಸಿದ್ಧತೆ ಆರಂಭಗೊಂಡಿದೆ. ಸಮಾರಂಭಕ್ಕೆ ಕೇವಲ 3 ದಿನಗಳು ಬಾಕಿಯಿದೆ. ಇರುವ ಕಡಿಮೆ ಸಮಯಾವಕಾಶದಲ್ಲಿ ಜಲಪಾತೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಭರಚುಕ್ಕಿ ಅಂಗಳದಲ್ಲಿ ಬೃಹತ್ ಸಾಂಕ್ಕೃತಿಕ ಕಾರ್ಯಕ್ರಮದ ವೇದಿಕೆ, ಜಲಪಾತಕ್ಕೆ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಶೌಚಗೃಹ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇನ್ನಿತರ ಸೌಲಭ್ಯಕ್ಕೆ ಸಿದ್ಧತೆ ನಡೆಯುತ್ತಿದೆ.

ಮುಖ್ಯಮಂತ್ರಿಗಳಿಂದ ಚಾಲನೆ: ಕಾರ್ಯಕ್ರಮಕ್ಕೆ ಆ.10ರಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. ನಂತರ, ಭರಚುಕ್ಕಿ ಜಲಪಾತದ ದೀಪಾಂಲಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಂಸದ ಸುನೀಲ್ ಬೋಸ್, ಹನೂರು ಶಾಸಕ ಎಂ.ಆರ್.ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ.

ಆಕರ್ಷಣೀಯ ದೀಪಾಂಲಕಾರ, ಸಾಂಸ್ಕೃತಿಕ ಕಾರ್ಯಕ್ರಮ: ಪ್ರವಾಸಿಪ್ರಿಯರಿಗೆ ಮುದ ನೀಡಲು ಜಲಪಾತಕ್ಕೆ ಆಕರ್ಷಕ, ವರ್ಣರಂಜಿತ ದೀಪಾಂಲಕರ, ಜತೆಗೆ ಸೌಂಡ್ಸ್ ಅಳವಡಿಸಲಾಗಿದೆ. ಈ ಕಾರ್ಯವನ್ನು ಲಾಫಿಂಗ್‌ವಾಟರ್ ಪ್ರೊಡಕ್ಷನ್ ಈವೆಂಟ್ ಮ್ಯಾನೇಜ್‌ಮೆಂಟ್ ನಿರ್ವಹಿಸಲಿದೆ. ಜತೆಗೆ ವೇದಿಕೆಯಲ್ಲಿ ಜಿಲ್ಲೆ ಸೇರಿದಂತೆ ಇತರ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಗಾಯಕಿ ಅನನ್ಯಾಭಟ್ ಸೇರಿದಂತೆ ಇತರ ಕಲಾವಿದರು ಆಗಮಿಸಲಿದ್ದಾರೆ.

ಸಿದ್ಧತೆ ವೀಕ್ಷಿಸಿದ ಡಿಸಿಜಲಪಾತೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭರಚುಕ್ಕಿ ಅಂಗಳಕ್ಕೆ ಭೇಟಿ ಪೂರ್ವಸಿದ್ಧತೆ ವೀಕ್ಷಿಸಿದರು. ವೇದಿಕೆ ನಿರ್ಮಾಣ, ಗಣ್ಯರು, ಆಹ್ವಾನಿತರು, ವೀಕ್ಷಿಸುವ ಗ್ಯಾಲರಿ, ಪಾರ್ಕಿಂಗ್, ಆಹಾರ ಮೇಳ, ಶೆಟಲ್ ಬಸ್ ವ್ಯವಸ್ಥೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಜಿಪಂ ಸಿಇಒ ಮೋನಾ ರೋಹಟ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಡಿಸಿಎಫ್ ಸಂತೋಷ್ ಕುಮಾರ್, ಎಸಿ ಮಹೇಶ್, ತಹಸೀಲ್ದಾರ್ ಮಂಜುಳಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಬಾರಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಚೆಲುವ ಚಾಮರಾಜನಗರ ಅಭಿಯಾನದ ಅಡಿಯಲ್ಲಿ ಭರಚುಕ್ಕಿ ಜಲಪಾತೋತ್ಸವ ಆಯೋಜಿಸಲಾಗಿದೆ. ಉತ್ತಮ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದೆ. ಸಾರ್ವಜನಕರಿಗೆ ಉಚಿತ ಪ್ರವೇಶವಿದೆ. ನಮ್ಮ ಜಿಲ್ಲೆ ಸೇರಿದಂತೆ ನೆರೆಹೊರೆಯ ಜಿಲ್ಲೆಯ ಜನರು ಆಗಮಿಸಿ ವೀಕ್ಷಣೆ ಮಾಡಬೇಕು.ಶಿಲ್ಪಾನಾಗ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net