ಕಾಡಾನೆಗಳ ದಾಳಿಗೆ ತರಕಾರಿ ಬೆಳೆ ನಾಶ

6-kollegal-2,,
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದ ಜಮೀನಿಗೆ ಸೋಮವಾರ ರಾತ್ರಿ ಕಾಡಾನೆ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡಿದ್ದು, ಆಟೋವನ್ನು ಜಖಂಗೊಳಿಸಿವೆ.

ಗ್ರಾಮದ ಫೀರ್ ಜಹಾನ್ ಅವರು ತಮ್ಮ ಜಮೀನನ್ನು ಸುಲ್ತಾನ್ ಅವರಿಗೆ ಗುತ್ತಿಗೆಗೆ ನೀಡಿದ್ದರು. ಅವರು ಕೃಷಿ ಮಾಡುತ್ತಿದ್ದರು. ರಾತ್ರಿ 2 ಬಾರಿ ಕಾಡಾನೆ ಹಿಂಡು ಜಮೀನಿಗೆ ನುಗ್ಗಿ ಬೆಂಡೆ ಕಾಯಿ, ಬೀನ್ಸ್, ಟೊಮ್ಯಾಟೊ ಬೆಳೆ ತಿಂದು ಹಾನಿ ಮಾಡಿವೆ. ಅಲ್ಲದೆ ತೋಟದ ಮನೆಯ ಮುಂದಿದ್ದ ಮಾವಿನ ಮರ, ಪರಂಗಿ ಗಿಡಗಳನ್ನು ಮುರಿದುಹಾಕಿವೆ. ಈ ವೇಳೆ ಮನೆಯಲ್ಲಿದ್ದ ಸುಲ್ತಾನ್ ಅರಣ್ಯಾಧಿಕಾರಿಗಳು ನೀಡಿದ್ದ ಪಟಾಕಿ ಸಿಡಿಸಿದ್ದಾರೆ. ಆದರೂ ಹೆದರದ ಆನೆಗಳು ಮನೆಯ ಮುಂದೆ ನಿಂತಿದ್ದ ಆಟೋವನ್ನು ಜಖಂಗೊಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net