ವಕೀಲರ ಬಳಿ ಎಸ್‌ಡಿಎ ಲಂಚಕ್ಕೆ ಬೇಡಿಕೆ

18kglphoto5..,.
Published on

ಕೊಳ್ಳೇಗಾಲ: ಜನನ-ಮರಣ ನೋಂದಣಿಯ ಅಲಭ್ಯ ಪ್ರಮಾಣಪತ್ರ ನೀಡಲು ಲಂಚಕ್ಕಾಗಿ ಬಹಿರಂಗ ಬೇಡಿಕೆ ಇಟ್ಟಿದ್ದಲ್ಲದೆ, ಅರ್ಜಿದಾರರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶ್ರೀಧರ್ ಎಂಬುವರ ವಿರುದ್ಧ ತಹಸಿಲ್ದಾರ್‌ಗೆ ದೂರು ಸಲ್ಲಿಕೆಯಾಗಿದೆ.

ವಕೀಲ ಚಂದ್ರಶೇಖರ್ ದೂರು ನೀಡಿದವರಾಗಿದ್ದು, ಆರೋಪಿ ನೌಕರನ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ದೂರು ಸ್ವೀಕರಿಸಿರುವ ತಹಸೀಲ್ದಾರ್ ಮಂಜುಳಾ, ಆರೋಪಿ ನೌಕರನಿಗೆ ನೋಟಿಸ್ ನೀಡಿ ಮುಂದಿನ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಪದಾಧಿಕಾರಿಗಳಾದ ರಿಯಾಜ್ ಪಾಷ, ನಾಗೇಶ್ ನಾಯ್ಕ, ಆಯಾಜ್ ಪಾಷ, ಅಪ್ರೋಜ್ ಪಾಷ ಇತರರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net