ಅರಣ್ಯ ಪ್ರವೇಶಿಸಿದ ಒಬ್ಬನ ಬಂಧನ

24kglphoto-5_kempegowda
Published on

ಕೊಳ್ಳೇಗಾಲ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ಮುಂದಾಗಿದ್ದ ಇಬ್ಬರ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಒಬ್ಬನನ್ನು ನಾಡ ಬಂದೂಕು ಸಮೇತ ಬಂಧಿಸಿದ್ದಾರೆ.

ತಾಲೂಕಿನ ಚೆನ್ನಿಪುರದೊಡ್ಡಿ ಗ್ರಾಮದ ನಿವಾಸಿ ಕೆಂಪೇಗೌಡ (75) ಬಂಧಿತ. ಜಾಗೇರಿಯ ಶಾಂತಿನಗರದ ನಿವಾಸಿ ಥಾಮಸ್ (45) ಪರಾರಿಯಾಗಿದ್ದಾನೆ.
ತಾಲೂಕಿನ ಜಾಗೇರಿ ರಸ್ತೆಯಲ್ಲಿರುವ ಪೇಪರ್ ಮಿಲ್ ಬಳಿ ಶನಿವಾರ ಬಂದೂಕು ಇಟ್ಟುಕೊಂಡು ಕಾಡುಪ್ರಾಣಿ ಬೇಟೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಗಣೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಕೆಂಪೇಗೌಡ ಸಿಕ್ಕಿಬಿದ್ದಿದ್ದು, ಥಾಮಸ್ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net