

ಕೊಳ್ಳೇಗಾಲ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 13 ಜನ ಗೆಲುವು ಸಾಧಿಸಿದ್ದಾರೆ.
ಪಟ್ಟಣದ ಶ್ರೀ ಗುರುಮಲ್ಲೇಶ್ವರ ಕೊಂಗವೀರೇಗೌಡರ ವಸತಿ ನಿಲಯದಲ್ಲಿ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 17 ಜನ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಒಟ್ಟು 1148 ಮತಗಳ ಪೈಕಿ, 714 ಜನರು ಮತ ಚಲಾಯಿಸಿದರು. ಪ್ರತಿ ಮತದಾರರಿಗೆ ತಲಾ 13 ಮತ ಚಲಾಯಿಸುವ ಅವಕಾಶವಿತ್ತು. ಚುನಾವಣೆ ಬಳಿಕ ಮತ ಏಣಿಕೆಯಲ್ಲಿ ಹೆಚ್ಚು ಮತಗಳನ್ನು ಗಳಿಸಿಕೊಂಡ 13 ಜನರನ್ನು ನೂತನ ನಿರ್ದೇಶಕರಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವಮಲ್ಲಪ್ಪ ಘೋಷಣೆ ಮಾಡಿದರು.
ನೂತನ ನಿರ್ದೇಶಕರಾಗಿ ಕೆ.ಎಸ್.ಮಹೇಶ್ ಕೆಂಪನಪಾಳ್ಯ (466 ಮತಗಳು), ರವಿಕುಮಾರ್ ತೇರಂಬಳ್ಳಿ (446), ಎಂ. ಶಿವಕುಮಾರ್ (438), ಕಿರಣ್ ಕುಮಾರ್ ಕಾಮಗೆರೆ (424), ಜಿ.ನಟರಾಜು ಜಿನಕಹಳ್ಳಿ (423), ಮಹಾದೇವಸ್ವಾಮಿ ಅಚ್ಗಾಳ್ (412), ಎಂ.ಇ. ಬಸವರಾಜು (408), ಬಸವರಾಜು ಹೊಸಮಾಲಂಗಿ (368), ಮಹಾದೇವಸ್ವಾಮಿ ತಿಮ್ಮರಾಜೀಪುರ (361), ಮನು ಕೊಳ್ಳೇಗಾಲ(360), ಶಿವಕುಮಾರಮೂರ್ತಿ ಕೊಳ್ಳೇಗಾಲ (343), ಕಾಂತರಾಜು ಕುಣಗಳ್ಳಿ (341), ನಟರಾಜು ಸರಗೂರು (333) ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಪುಟ್ಟಣ್ಣ ತಿಮ್ಮರಾಜೀಪುರ ಹಾಗೂ ಸದಸ್ಯರು, ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.