‘ಕಾವೇರಿ’ ಹರಿವು ಹೆಚ್ಚಾದ್ರೆ ಜೀವಭಯ

22rajesh3
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3164813, 0.3984894);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 33;
Published on

ಕೊಳ್ಳೇಗಾಲ; ನಿರಂತರ ಮಳೆ, ಕಬಿನಿ, ಕೆಆರ್‌ಎಸ್ ಅಣೆಕಟ್ಟೆಗಳ ಹೊರಹರಿವು ಹೆಚ್ಚಳ ನದಿ ಪಾತ್ರದ ಗ್ರಾಮಗಳ ಎದೆ ಬಡಿತವನ್ನೂ ಹೆಚ್ಚಳ ಮಾಡಿವೆ.

ಜಿಲ್ಲೆಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಕಾವೇರಿ ನದಿ ದಡದಲ್ಲಿ ಆನೇಕ ಗ್ರಾಮಗಳಿವೆ. ದಾಸನಪುರ, ಹಳೇ ಹಂಪಾಪುರ, ಮುಳ್ಳೂರು, ಹಳೇಅಣಗಳ್ಳಿ, ಸರಗೂರು, ಧನಗೆರೆ, ಹರಳೆ, ಅಗ್ರಹಾರ, ಯಡಕುರಿಯಾ ಗ್ರಾಮಗಳು ಆತಂಕದಲ್ಲಿವೆ. ಈಗಾಗಲೇ ಅಗ್ರಹಾರ ಗ್ರಾಮದ ಜಮೀನು ಜಲಾವೃತಗೊಂಡಿದೆ. ನದಿಯಂಚಿನಲ್ಲಿರುವ ಮನೆಗಳ ನಿವಾಸಿಗಳು ಸುರಕ್ಷತೆ ಇಲ್ಲದೆ ಭೀತಿಯಲ್ಲಿದ್ದಾರೆ.

2019ರಲ್ಲಿ ಪ್ರವಾಹ ಸಂಭವಿಸಿದ್ದಾಗ ಈ ಗ್ರಾಮಗಳು ನಲುಗಿ ಹೋಗಿದ್ದವು. ಆಸ್ತಿ-ಪಾಸ್ತಿ ನಷ್ಟ ಉಂಟಾಗಿತ್ತು. ಈ ಸಲವೂ ಪ್ರವಾಹ ಉಂಟಾದರೆ ಹಿಂದಿನ ಸ್ಥಿತಿಗೆ ಮತ್ತೆ ಮರಳಬೇಕಾಗುತ್ತದೆ ಎನ್ನುವ ಚಿಂತೆ ಜನರನ್ನು ಕಾಡುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಎಚ್ಚೆತ್ತುಕೊಂಡು, ಸಮಾರೋಪಾದಿಯಲ್ಲಿ ಕೆಲಸ ಮಾಡಲು ಮುಂದಾಗುವ ಆಡಳಿತ ವ್ಯವಸ್ಥೆ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುತ್ತಿಲ್ಲ. ಹೀಗಾಗಿ ಮಳೆಗಾಲದಲ್ಲಿ ಗ್ರಾಮಸ್ಥರು ಭಯದಲ್ಲೇ ಬದುಕುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net