ಕೊಳ್ಳೇಗಾಲದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ

21-kollegal-1
Published on

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಕಣ್ಣಿನ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ನಿರ್ದೇಶಕ ಚನ್ನಮಾದೇಗೌಡ, ದೇಹದ ಎಲ್ಲ ಅಂಗಾಂಗಗಳಿಗಿಂತ ಕಣ್ಣು ಬಹಳ ಸೂಕ್ಷ್ಮವಾದದ್ದು. ಆದ್ದರಿಂದ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು.

ಕ್ಲಬ್ ವತಿಯಿಂದ ಈವರೆಗೆ ಸುಮಾರು 227 ಕಣ್ಣಿನ ಶಿಬಿರ ಆಯೋಜಿಸಲಾಗಿದೆ. 11,12,670 ಜನರು ಸೌಲಭ್ಯ ಪಡೆದಿದ್ದಾರೆ.
ಇವರಲ್ಲಿ 11,394 ಜನರು ಉಚಿತವಾಗಿ ಶಸ್ತ್ರ ಚಿಕಿತ್ಸೆ ಪ್ರಯೋಜನ ಪಡೆದಿದ್ದಾರೆ. ಮುಂದೆಯೂ ಶಿಬಿರಗಳು ನಡೆಯಲಿದ್ದು, ಕಣ್ಣಿನ ದೋಷ ಇರುವವರು ಇದರ ಸದುಪಯೋಗ ಪಡೆಯಬಹುದು ಎಂದು ಹೇಳಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಚಿಕ್ಕಬಸವಯ್ಯ ಮಾತನಾಡಿ, 60 ಜನರು ಶಿಬಿರದ ಸೌಲಭ್ಯ ಪಡೆದಿದ್ದು. ಇದರಲ್ಲಿ 33 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ವೈದ್ಯರ ದಿನಾಚರಣೆ ಅಂಗವಾಗಿ ಲಯನ್ ವೆಸ್ಟ್ ಆಸ್ಪತ್ರೆಯ ವೈದ್ಯ ಡಾ.ಆಯುಷ್ ಅವರನ್ನು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕಾರ್ಯದರ್ಶಿ ಇಂದ್ರೇಶ್, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಬಾಬು, ಖಜಾಂಜಿ ವಿರೂಪಾಕ್ಷ, ಲಯನ್ ವಿದ್ಯಾಸಂಸ್ಥೆ ಖಂಜಾಚಿ ಎಸ್.ನಾಗರಾಜು ಕೊಂಗರಹಳ್ಳಿ, ಜಿಎಸ್‌ಎಂ ಪ್ರಸಾದ್, ಚೇತನ್, ಜಯಪ್ರಕಾಶ್, ನಾರಾಯಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net