ಪೈರು ತಿಂದು ಹಾಕಿದ ಜಿಂಕೆಗಳು

18kglphoto-4.,,,
Published on

ಕೊಳ್ಳೇಗಾಲ: ತಾಲೂಕಿನ ಜಕ್ಕಳಿ ಗ್ರಾಮದ ಜಮೀನಿನಲ್ಲಿ ರೈತರೊಬ್ಬರು ಇತ್ತೀಚೆಗಷ್ಟೆ ಬಿತ್ತನೆ ಮಾಡಿದ್ದ ಜೋಳದ ಫಸಲನ್ನು ಜಿಂಕೆಗಳು ತಿಂದು ನಷ್ಟ ಉಂಟು ಮಾಡಿದೆ. ಗ್ರಾಮದ ಸತ್ತಿ ಎಂಬುವರಿಗೆ ಸೇರಿದ ಜಮೀನಿಗೆ ಸೋಮವಾರ ರಾತ್ರಿ ಜಿಂಕೆಯ ಹಿಂಡು ಲಗ್ಗೆ ಹಿಟ್ಟು ಜೋಳದ ಪೈರನ್ನು ತಿಂದು ಹಾಕಿದೆ.

ಈ ಬಗ್ಗೆ ರೈತ ಸತ್ತಿ ವಿಜಯವಾಣಿ ಜತೆ ಮಾತನಾಡಿ, ಪ್ರತಿ ದಿನ ಜಿಂಕೆಗಳ ಹಿಂಡು ಬರುತ್ತಿದೆ. ಬೆಳೆಯನ್ನು ಹಾನಿ ಮಾಡುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net