ಗ್ರಾಪಂ ಉಪಾಧ್ಯಕ್ಷರಾಗಿ ಮಹೇಶ್ ಅವಿರೋಧ ಆಯ್ಕೆ

19-kollegal-2,,,,,,
Published on

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಮಹದೇವಮ್ಮ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಗ್ರಾ.ಪಂ. ಆವರಣದಲ್ಲಿ ಚುನಾವಣೆ ನಿಗಿದಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಮಹೇಶ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಚುನಾವಣೆಯಲ್ಲಿ 15 ಸದಸ್ಯರ ಪೈಕಿ 9 ಸದಸ್ಯರು ಹಾಜರಾಗಿದ್ದರು. ಉಳಿದ 6 ಸದಸ್ಯರು ಗೈರಾಗಿದ್ದರು. ನೂತನ ಉಪಾಧ್ಯಕ್ಷ ಮಹೇಶ್ ಅವರನ್ನು ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಎಚ್.ನಂಜುಂಡಸ್ವಾಮಿ, ಎಂ. ದೊರೆರಾಜು, ಸಿದ್ದಶೆಟ್ಟಿ, ಕಮಲಮ್ಮ, ಚಂದ್ರಬಾಬು, ರತಿ, ಮಹದೇವಮ್ಮ, ಕೆ.ರುಕ್ಕುರಮ್ಯ, ಮಹೇಶ್, ಪಿಡಿಒ ಸವಿತಾ ಅಭಿನಂದಿಸಿದರು.
ನೂತನ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಗ್ರಾ.ಪಂ ಅಧ್ಯಕ್ಷರು, ಸದಸ್ಯರ ಜತೆಗೂಡಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಮುಳ್ಳೂರು ಗ್ರಾಮದ ನಾಡಗೌಡ ಇಂದ್ರೇಶ್, ಜಿ.ಪಂ. ಮಾಜಿ ಸದಸ್ಯೆ ಯಶೋದಾ ಪ್ರಭುಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ. ಸಿದ್ದಪ್ಪಸ್ವಾಮಿ, ತಾ.ಪಂ. ಮಾಜಿ ಸದಸ್ಯ ಕೃಷ್ಣನಾಯಕ, ಮುಖಂಡ ಬಿ. ಮಂಜುನಾಥ್, ನಾಗರಾಜೇಗೌಡ, ಪುಟ್ಟಸ್ವಾಮಿ (ಎಂಕೆಪಿ), ಬಾಬು, ಅಂಗಡಿ ಸಿದ್ದಣ್ಣ, ಯಜಮಾನರಾದ ನಿಂಗನಾಯಕ, ರಂಗಸ್ವಾಮಿ, ವೆಂಕಟರಾಮ ನಾಯಕ, ಬಸವಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net