ರಸ್ತೆ ಗುಂಡಿ ಮುಚ್ಚದಿದ್ದರೆ ಹೋರಾಟ

Published on

ಕೊಳ್ಳೇಗಾಲ: ತಾಲೂಕಿನ ನರೀಪುರ ರಾಷ್ಟ್ರೀಯ ಹೆದ್ದಾರಿ (209)ಯಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಸಂಬಂಧಪಟ್ಟವರು ಮುಚ್ಚದಿದ್ದರೆ ಹೋರಾಟ ಮಾಡುವುದಾಗಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದ್ದಾರೆ.

ಪಟ್ಟಣದ ಸರಹದ್ದಿನ ಗಡಿಯಲ್ಲಿರುವ ಪಾಪನಕೆರೆ ಬಳಿ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಗೆ ಬರುವ ನರೀಪುರ ಗ್ರಾಮದ ರಸ್ತೆಯಲ್ಲಿ ಬಾರಿ ಗುಂಡಿ ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ. ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುವ ಹೆದ್ದಾರಿ (209) ರಸ್ತೆ ಇದಾಗಿದೆ. ಸವಾರರು ಈ ರಸ್ತೆಯಲ್ಲಿ ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಇದೆ. ಹೆದ್ದಾರಿಯಾದ ಕಾರಣ ದಿನವಿಡೀ ಸಾವಿರಾರು ವಾಹನಗಳು ಬೆಂಗಳೂರು, ಮೈಸೂರು, ಚಾಮರಾಜನಗರ, ತಮಿಳನಾಡಿಗೆ ಸಂಚರಿಸುತ್ತವೆ. ಈ ಗುಂಡಿಗಳಿಂದ ಅಪಘಾತಕ್ಕೀಡಾಗುತ್ತಿತ್ತು. ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುಂಡಿಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗದಿದ್ದರೆ ರೈತ ಸಂಘ ರಸ್ತೆ ಸಂಚಾರ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net