

ಕೊಳ್ಳೇಗಾಲ: ಮೈಸೂರು ಯೂತ್ ಮಾರ್ಸಲ್ ಆರ್ಟ್ಸ್ ಅಕಾಡೆಮಿ ಮೈಸೂರಿನ ಪೆವಿಲಿಯನ್ ಜಿಮ್ನಶಿಯಂ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಳ್ಳೇಗಾಲದ ಮಾಸ್ಟರ್ ಕರಾಟೆ ಅಕಾಡೆಮಿಯ 5 ವಿದ್ಯಾರ್ಥಿಗಳು ಕಥಾ ಮತ್ತು ಕುಮಿತೆ ವಿಭಾಗದಲ್ಲಿ ಬಾಗವಹಿಸಿ 9 ಬಹುಮನ ಪಡೆದಿದ್ದಾರೆ.
ಕರಾಟೆ ಪಟುಗಳಾದ ಎಸ್.ದೀಕ್ಷಿತ್ ಕಥಾ ಮತ್ತು ಕುಮಿತೆ ಎರಡರಲ್ಲೂ ಪ್ರಥಮ ಸ್ಥಾನಪಡೆದಿದ್ದಾರೆ. ಪಿ.ಕೆ.ಧನ್ವಂತ ಕಥಾದಲ್ಲಿ (ಪ್ರ), ಕುಮಿತೆಯಲ್ಲಿ (ದ್ವಿ) ಬಹುಮಾನ ಪಡೆದಿದ್ದಾರೆ. ಲಿಖಿತ್ ಜೋಗಿ ಕಥಾ ದಲ್ಲಿ (ತೃ), ಕುಮಿತೆ (ದ್ವಿ) ಬಹುಮಾನ ಗಳಿಸಿದ್ದಾರೆ. ಪರಶುರಾಮ್ ಕಥಾದಲ್ಲಿ (ದ್ವಿ), ನಿಹಾನ್ ಕಥಾದಲ್ಲಿ (ತೃ) ಹಾಗೂ ಕುಮಿತೆಯಲ್ಲಿ (ತೃ) ಸ್ಥಾನ ಪಡೆದಿದ್ದಾರೆ. ಬಹುಮಾನಪಡೆದ ಕರಾಟೆ ಪಟುಗಳನ್ನು ಆಯೋಜಕರಾದ ಮಾದೇಶ್, ವಿದ್ಯಾಸಾಗರ್, ನಿಖಿಲ್, ಕರಾಟೆ ಮಾಸ್ಟರ್ ಕೆ.ನಂಜುಂಡಸ್ವಾಮಿ ಅಭಿನಂದಿಸಿದರು.