

ಕೊಳ್ಳೇಗಾಲ; ತಾಲೂಕಿನ ಕೊಂಗರಹಳ್ಳಿ ಗ್ರಾಮದ ನಟರಾಜ ಚಿತ್ರಮಂದಿರದ ಖಾಲಿ ತೊಟ್ಟಿಯಲ್ಲಿ ಬುಧವಾರ ಗರ್ಭಿಣಿ ಇಲಾಚಿ ಹಸು ಬಿದ್ದು ಮೃತಪಟ್ಟಿದೆ.
ಗ್ರಾಮದ ಶ್ರೀನಿವಾಸ್ ಅವರಿಗೆ ಸೇರಿದ ಹಸು ಇದಾಗಿದೆ. ಮೇವು ತಿನ್ನಲೆಂದು ತೆರಳಿದ್ದ ಹಸುವಿಗೆ ಮಾಲೀಕರು ನೀರು ಕುಡಿಸಲು ಹೋದ ವೇಳೆ ತೊಟ್ಟಿಯಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ. ಇದರಿಂದ ದಿಗ್ಬ್ರಮೆಗೊಳಗಾದ ಮಾಲೀಕ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ನಂತರ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ಮೇಲಕ್ಕೆ ಎತ್ತಿದರು.