ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್‌ಬುಕ್ ವಿತರಣೆ

4 kollegal-5
Published on

ಕೊಳ್ಳೇಗಾಲ : ಪಟ್ಟಣದ ಭೀಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 18 ವಿದ್ಯಾರ್ಥಿಗಳಿಗೆ ಗುರುವಾರ ಭಾವನ ಹಾರ್ಡ್ ವೇರ್ ಆ್ಯಂಡ್ ಸೆರಾಮಿಕ್ಸ್ ಹಾಗೂ ಕಲರ್ ಐಡಿಯಾಸ್ ವಿತ್ ಏಷಿಯನ್ ಪೇಂಟ್ಸ್ ಸ್ಟೋರ್ ಮಾಲೀಕ ಜೆ.ಎಸ್.ರಾಮ್‌ಮೋಹನ್ ಉಚಿತ ವಾಗಿ ನೋಟ್‌ಬುಕ್‌ಗಳನ್ನು ವಿತರಿಸಿದರು.

ಇಂದಿನ ಮಕ್ಕಳೇ ಮುಂದಿನ ದೇಶದ ಸತ್ಪ್ರಜೆಗಳು. ಹಾಗಾಗಿ ಎಲ್ಲರೂ ಬಾಲ್ಯದಿಂದಲೇ ಮಕ್ಕಳನ್ನು ಶೈಕ್ಷಣಕವಾಗಿ ಪ್ರೋತ್ಸಾಹಿಸಬೇಕು. ಅದರಲ್ಲೂ ದೀನ ದಲಿತರು, ಬಡ ಕುಟುಂಬದ ಮಕ್ಕಳಿಗೆ ಸ್ಥಿತಿವಂತ ಕುಟುಂಬಗಳಿಂದ ಶೈಕ್ಷಣಿಕ ಪರಿಕರ ಉಚಿತವಾಗಿ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನನ್ನ ಪುತ್ರ ದಿ.ಅಂಜನ್ ಸ್ಮರಣಾರ್ಥ ನೋಟ್‌ಬುಕ್ ವಿತರಿಸಲಾಗಿದೆ. ಮುಂದಿನ ದಿನದಲ್ಲಿ ವಿವಿಧ ರೀತಿಯ ಆಟೋಪಕರಣ ಸೇರಿದಂತೆ ಇತರ ಹೆಚ್ಚಿನ ನೆರವು ದೊರಕಿಸಲಾಗುವುದು ಎಂದು ಭರವಸೆ ನೀಡಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎಂ.ಹೇಮಲತಾ ಮಾತನಾಡಿದರು. ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಸಹ ಶಿಕ್ಷಕರಾದ ಜೆ.ಸುವರ್ಣಾ, ಪಿ.ಎಂ.ವರಲಕ್ಷ್ಮೀ, ಭಾವನ ಹಾರ್ಡ್ ವೇರ್ ವ್ಯವಸ್ಥಾಪಕ ಹರೀಶ್, ಸನತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net