ಪೌರಕಾರ್ಮಿಕರಿಗೆ ಸುರಕ್ಷತಾ ಉಪಕರಣ ಬಳಕೆ ಕಡ್ಡಾಯ

29-KOLLEGAL-1,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;
Published on

ಕೊಳ್ಳೇಗಾಲ: ಪೌರಕಾರ್ಮಿಕರು ಸ್ವಚತಾ ಕಾರ್ಯ ಮಾಡುವಾಗ ಸುರಕ್ಷತಾ ಉಪಕರಣಗಳನ್ನು ( ಸೇಫ್ಟಿ ಕಿಟ್) ಕಡ್ಡಾಯವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ಸೂಚನೆ ನೀಡಿದರು.

ಪಟ್ಟಣದ ಎಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸಭೆಯಲ್ಲಿ
ಮಾತನಾಡಿದರು ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಸರ್ಕಾರದಿಂದ ಅವರಿಗೆ ನೀಡುವ ಗ್ಲೌಸ್, ಶೂಗಳನ್ನು ಧರಿಸಿಯೇ ಅವರು ಕೆಲಸ ಮಾಡುವ ರೀತಿ ನೋಡಿಕೊಳ್ಳಬೇಕು. ಒಂದು ವೇಳೆ ಅವರು ಬಳಸಲು ಇಚ್ಚಿಸದಿದ್ದರೆ ಪೌರಕಾರ್ಮಿಕರಿಂದ ಲಿಖಿತ ರೂಪದಲ್ಲಿ ಹೇಳಿಕೆ ಪಡೆಯಬೇಕು. ಸುರಕ್ಷತಾ ಉಪಕರಣಗಳನ್ನು ಬಳಸದೆ ಪೌರಕಾರ್ಮಿಕರಿಂದ ಸ್ವಚ್ಛತಾ ಕೆಲಸ ಮಾಡಿಸಿದರೆ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಮಾಹಿತಿ, ಸುರಕ್ಷಿತ ಪರಿಕರ ವಿತರಣೆ ಹಾಗೂ ಪೌರಕಾರ್ಮಿಕರು ಧರಿಸಿ ಕೆಲಸ ಮಾಡುತ್ತಿರುವ ಫೋಟೋಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಯಾಗಬೇಕು. ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಬೇಕು. ಆರೋಗ್ಯ ತಪಾಸಣೆ ನಡೆಸಿದ ಭಾವಿಚಿತ್ರಗಳನ್ನು ಗ್ರೂಪ್‌ಗಳಿಗೆ ಹಾಕುತ್ತಿಲ್ಲ. ಇನ್ಮುಂದೆ ಎಲ್ಲ ವರದಿಯೂ ಸಮರ್ಪಕವಾಗಿ ಇರಬೇಕೆಂದು ಸೂಚನೆ ನೀಡಿದಲ್ಲದೆ, ಪೌರ ಕಾರ್ಮಿಕರ ವಿಶ್ರಾಂತಿ ಗೃಹದಲ್ಲಿ ಮೂಲ ಸೌಕರ್ಯವಿರಬೇಕು ಎಂದರು.

ಮ್ಯಾನುವೆಲ್ ಸ್ಕಾವೆಂಜರ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ದುಷ್ಕೃತ್ಯ ನಡೆಯದಂತೆ ನೋಡಿಕೊಳ್ಳಬೇಕು. ಅಂತೆಯೇ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಇದು ಕಂಢು ಬಂದರೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net